ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರಲ್ಲಿ ವಿನಂತಿ – ರಿಮೋಟ್ ಕಂಟ್ರೋಲ್ ಸಂದೇಶವೊಂದು ವೈರಲ್…..

Suddi Sante Desk

ಬೆಂಗಳೂರು –

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗುರು ಶಿಷ್ಯರ ರಿಮೋಟ್ ಕಂಟ್ರೋಲ್ ನಲ್ಲಿದ್ದು ಸರಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಮುನ್ನಡೆದರೆ ಎಲ್ಲಿ ನಮ್ಮ ಹುಳುಕುಗಳು ಹೊರಬೀಳುತ್ತೋ ಅಂತಾ ಅಂಜಿಕೆಯಿಂದ‌ 18-10-2021 ಕ್ಕೆ ಸಭೆ ನಿರ್ಣಯವಾಗಿದ್ದರೂ ಇಬ್ಬರೂ ರಾಜ್ಯಾಧ್ಯಕ್ಷರುಗಳ ವಿರುದ್ಧ ಷಡ್ಯಂತ್ರ ಮಾಡಿ 16ಕ್ಕೆ ಸಭೆ ನಿಗದಿಗೊಳಿಸಿ 18ರ ಸಭೆ ವಿಫಲಗೊಳಿಸುವಲ್ಲಿ ಯತ್ನಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.ಇವರು ಇದನ್ನೆ ಮಾಡ್ತಾ ಬಂದಿದ್ದಾರೆ ನಾಳೆಯ ದಿನ ಎಷ್ಟು ಜನ ಪದಾಧಿಕಾ ರಿಗಳು ಬರ್ತಾರೋ ಅಷ್ಟೆ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲು ಕೋರಿದೆ.

ಇದು ರಾಜ್ಯಾಧ್ಯಕ್ಷರುಗಳ ವಿರುದ್ಧ ತೆಗೆದುಕೊಂಡ ನಿರ್ಣಯವಾಗಿದ್ದು ಇನ್ನು ಮುಂದೆಯಾದರೂ ಇಂತವರ ಬಗ್ಗೆ ಎಚ್ಚರವಿರಿ ನಿಮ್ಮ ಪ್ರಾಮಾಣಿಕ ಹೋರಾಟಗಳಿಗೆ ನಮ್ಮ ಬೆಂಬಲವಿದೆ ಕೂಡಲೇ ಎಲ್ಲ ಶಿಕ್ಷಕ ಸಂಘಟನೆ ಗಳನ್ನು ಸಂಪರ್ಕಿಸಿ ಅವರ ಹೋರಾಟಗಳಿಗೆ ನೇರವಾಗಿ ಬೆಂಬಲ ನೀಡಿ ಯಾಕೆಂದರೆ ನಮ್ಮದು ನೌಕರರ ಸಂಘ ಸದಸ್ಯತ್ವ ಶುಲ್ಕ ಪಾವತಿಸುವ ಪ್ರತಿಯೊಬ್ಬ ನೌಕರರ ಹಿತ ಕಾಯುವದು ನಮ್ಮ ಆದ್ಯ ಕರ್ತವ್ಯ ಅವರು ಯಾವುದೇ ಸಂಘಟನೆಯಲ್ಲಿರಲಿ ನಮಗೆ ಗೌರವ ಕೊಟ್ಟವರಿಗೆ ನಾವು ಗೌರವ ಕೊಡೋಣ

ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತಿರುವ ತಮಗೆ ಧನ್ಯವಾದಗಳು ಎಲ್ಲ ಶಿಕ್ಷಕರು ಎಲ್ಲವನ್ನೂ ಗಮನಿಸುತ್ತಿದ್ದು ಅವರು ಪ್ರಾಮಾಣಿಕರಿಗೆ ಬೆಂಬಲ ನೀಡ್ತಾರೋ ಅಥವಾ ಸಾಲಗಾರರಿಗೆ ಸಾಥ್ ನೀಡ್ತಾರೋ ಕಾದು ನೋಡೋಣ. ಈ ಒಂದು ಲೇಖನವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ

ಜೈ KSGEA , JAI ಷಡಕ್ಷರಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.