ಕಲಬುರಗಿ –
ಕಲಬುರ್ಗಿ ವಿಭಾಗ ಮಟ್ಟದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹ ಶಿಕ್ಷಕರನ್ನು ನಿಯಮ 32 ರ ಅಡಿಯಲ್ಲಿ ಪ್ರೌಢಶಾಲಾ ಮುಖ್ಯ ಗುರುಗಳಾಗಿ ಬಡ್ತಿ ನೀಡಿ ಕೌನ್ಸಲಿಂಗ್ ಅನ್ನು ಬೇಗನೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಕ್ಷರಿ ಅವರ ನೇತೃತ್ವದಲ್ಲಿ ಮನವಿ ನೀಡಲಾಯಿತು.
ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ನವೀನ್ ಕುಮಾರ್ ಅತುಲ್ ದೂರವಾಣಿ ಮೂಲಕ ಸಂಪರ್ಕಿಸಿ ಬೇಗನೆ ಕೌನ್ಸಲಿಂಗ್ ನಡೆಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸೇಡಂ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಶಿವಶಂಕ ರಯ್ಯ ಸ್ವಾಮಿ.ಹುಣಸಗಿ ತಾಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಸಿದ್ದನಗೌಡ ಚೌದ್ರಿ,ಸೇಡಂ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚನ್ನಬಸವ ರೆಡ್ಡಿ, ಆಳಂದ್ ತಾಲೂಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮರಿಯಪ್ಪ ಬಡಿಗೇರ್,ಮತ್ತು ಬೀದರ್, ಬಳ್ಳಾರಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳ ಅನೇಕ ಬಡ್ತಿ ವಂಚಿತ ಶಿಕ್ಷಕರು ಭಾಗವಹಿಸಿದರು.ಸಕರಾತ್ಮಕವಾಗಿ ಸ್ಪಂದಿಸಿದರು.ಸಮಸ್ಯೆಗಳ ಕುರಿತು ಸ್ಪಂದಿಸದ ರಾಜ್ಯಾಧ್ಯ ಕ್ಷರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಮಸ್ತ ಶಿಕ್ಷಕರು ಹೇಳಿದರು.