ಸರಳ ಹಂಪಿ ಉತ್ಸವ
ಬಳ್ಳಾರಿ- ಕರೋನದ ನಡುವೆಯೂ
ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಮಾಡಲಾಗುತ್ತಿದೆ.ಕರೋನದ ಹಿನ್ನೆಲೆಯಲ್ಲಿ ಯಾವುದೇ ಹಬ್ಬ ಹರಿದಿನವನ್ನು ಅದ್ದೂರಿಯಾಗಿ ಮಾಡಲಾಗದೇ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ಈ ಬಾರಿ ಕೊರೋನಾ ಕಾರಣಕ್ಕೆ ಸರಳವಾಗಿ ಒಂದೇ, ಒಂದು ದಿನಕ್ಕೆ ಸೀಮಿತವಾಗಿ ನಾಳೆ ಆಚರಣೆ ಮಾಡಲಾಗುತ್ತಿದೆ.

ಹಂಪಿ ಉತ್ಸವದ ನಿಮಿತ್ತ ನಾಳೆ ಸಂಜೆ ನಾಲ್ಕು ಗಂಟೆಗೆ, ಹಂಪಿಯ ಉದ್ಧಾನ ವೀರಭದ್ರ ದೇವಾಲಯದ ಬಳಿ ಜಾನಪದ ವಾಹಿನಿಯ ಕಲಾ ತಂಡಗಳಿಗೆ ಚಾಲನೆ ನೀಡೋ ಮೂಲಕ ಅಧಿಕೃತವಾಗಿ ಆಚರಣೆ ಪ್ರಾರಂಭಿಸಿ, ರಾತ್ರಿ ತುಂಗಾ ಆರತಿ ಮಾಡೋ ಮೂಲಕ ಹಂಪಿ ಉತ್ಸವ ಮುಗಿಯಲಿದೆ. ಈಗಾಗಲೇ ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದೆ.

ಹಂಪಿ ಉತ್ಸವದ ನಿಮಿತ್ತ ಹಂಪಿಯ ಸ್ಮಾರಕಗಳು ಬೆಳಕಿನಲ್ಲಿ ಕಂಗೊಳಿಸುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ.