ಶಿವಮೊಗ್ಗ –
ಹೌದು ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಂತ ಹಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಕಟ್ಟಡಕ್ಕೆ ಬಣ್ಣ ಬಳಿದುಕೊಟ್ಟ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಮಲ್ಲಿಕಾ ರ್ಜುನ್ ಮತ್ತವರ ತಂಡಕ್ಕೆ ಶಾಲಾ ವಿದ್ಯಾರ್ಥಿಗಳು ಆತ್ಮೀ ಯವಾಗಿ ಸನ್ಮಾನಿಸಿ ಅಭಿನಂದಿಸಿದರು.ಬೆಳಗ್ಗೆಯೇ ಶಾಲೆಗೆ ಆಗಮಿಸಿದ ಟಿ.ಮಲ್ಲಿಕಾರ್ಜುನ್ ಹಾಗೂ ಮತ್ತವರ ತಂಡವು ಸೇವಾ ಕಾರ್ಯ ಆರಂಭಿಸಿತು.ಕಟ್ಟಡಕ್ಕೆ ಬಣ್ಣ ಹಚ್ಚಿತು.ಶಾಲೆ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಅವುಗಳ ರಕ್ಷಣೆಯ ಜವಾಬ್ದಾರಿವಹಿಸಿತು ನಂತರ ಶಾಲಾ ಕೊಠಡಿಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳೇ ಉಪ ಕಾರ್ಯದರ್ಶಿಯನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಇನ್ನೂ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ಅಬ್ಬಲಗೆರೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಿವಾನಾಯ್ಕ್, ಜಿ.ಪಂ ನ ಅನೂಪ್,ಗಣೇಶ್,ಸಂತೋಷ್,ಗೌರಿಶಂಕರ್, ಗ್ರಾ.ಪಂ ನೌಕರರಾದ ಕುಮಾರ್,ಮೋಹನ್, ನರಸಿಂಹರ ವರಿಗೆ ಹೂವು ನೀಡಿ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿ ದರು.ಕೆ.ಎ.ಎಸ್ ಅಧಿಕಾರಿಯಾದ ಟಿ. ಮಲ್ಲಿಕಾರ್ಜುನ್ ಮತ್ತವರ ತಂಡವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಂತ ಹಣದಲ್ಲಿ ಪ್ರತಿ ಭಾನುವಾರ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಹಾಗೂ ಕಟ್ಟಡಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಸುಣ್ಣ ಬಣ್ಣ ಬಳಿಯುತ್ತದೆ. ಜೊತೆಗೆ ಸಾರ್ವಜನಿಕ ಕಟ್ಟಡಗಳಲ್ಲಿನ ಕುಂದುಕೊರತೆ ಬಗೆಹರಿಸಿಕೊಂಡು ಬರುತ್ತಿದೆ.ಟಿ.ಮಲ್ಲಿಕಾರ್ಜುನ್ ಅವರ ಜನಪರ ಕಾಳಜಿಯು ಇಡೀ ರಾಜ್ಯದ ಗಮನ ಸೆಳೆದಿದೆ. ಇವರ ಸೇವೆ ಗಮನಿಸಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮಾಜ ಸೇವೆ: