ಯಾದಗಿರಿ –
ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ತರಲು ಹೊರಟಿದ್ದ ವಿದ್ಯಾರ್ಥಿಯೊರ್ವ ಅಪಘಾತಕ್ಕೆ ಬಲಿಯಾದ ಘಟನೆ ಯಾದಗಿರಿ ಯಲ್ಲಿ ನಡೆದಿದೆ. ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವಾಗಿ ಹಾಲ್ ಟಿಕೇಟ್ ತರಲು ಹೊರಟಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ

ಮಂಜುನಾಥ ಹಳ್ಳಿ ಸಾವನ್ನಪ್ಪಿದ ವಿದ್ಯಾರ್ಥಿ ಆಗಿದ್ದು ಸುರಪುರ ತಾಲೂನಿಕ ಚಿಕ್ಕನಹಳ್ಳಿ ಗ್ರಾಮದಿಂದ ಬಾಚಿಮಟ್ಟಿ ಗ್ರಾಮದ ಪ್ರೌಢಶಾಲೆಗೆ ಹೊರಟಿದ್ದನು.

ಹಾಲ್ ಟಿಕೇಟ್ ತರಲು ಟ್ರ್ಯಾಕ್ಟರ್ ನಲ್ಲಿ ಹೊರಟಿದ್ದ ವಿದ್ಯಾರ್ಥಿ ಮಂಜುನಾಥ.ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡತಾ ಇದ್ದಾರೆ