ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದ ಅಧ್ಯಯನ ತಂಡ – ಕ್ಷೇತ್ರದ ಶಾಸಕ NH ಕೋನರೆಡ್ಡಿ,ರೈತರ ಸಮ್ಮುಖದಲ್ಲಿಯೇ ಹಲವೆಡೆ ವೀಕ್ಷಣೆ ಮಾಹಿತಿ ಪಡೆದುಕೊಂಡ ತಂಡ…..

Suddi Sante Desk
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದ ಅಧ್ಯಯನ ತಂಡ – ಕ್ಷೇತ್ರದ ಶಾಸಕ NH ಕೋನರೆಡ್ಡಿ,ರೈತರ ಸಮ್ಮುಖದಲ್ಲಿಯೇ ಹಲವೆಡೆ ವೀಕ್ಷಣೆ ಮಾಹಿತಿ ಪಡೆದುಕೊಂಡ ತಂಡ…..

ನವಲಗುಂದ

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದ ಅಧ್ಯಯನ ತಂಡ – ಕ್ಷೇತ್ರದ ಶಾಸಕ NH ಕೋನರೆಡ್ಡಿ, ರೈತರ ಸಮ್ಮುಖದಲ್ಲಿಯೇ ಹಲವೆಡೆ ವೀಕ್ಷಣೆ ಮಾಹಿತಿ ಪಡೆದುಕೊಂಡ ತಂಡ…..

ಅತಿಯಾದ ಮಳೆಯಿಂದ ಹಾನಿಗೊಳಗಾದ ನವಲ ಗುಂದ ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದ ಅಧ್ಯಯನ ತಂಡವು ಪ್ರವಾಸವನ್ನು ಕೈಗೊಂಡಿದೆ.ಹೌದು ರಾಜ್ಯ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಪ್ರವಾಸ ಕೈಗೊಂಡ ತಂಡವು ನವಲಗುಂದ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ವೀಕ್ಷಣೆಯನ್ನು ಮಾಡಿತು.ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಅಣ್ಣಿಗೇರಿ ತಾಲ್ಲೂಕಿನ ನಲವಡಿ ಹಾಗೂ ಭದ್ರಾಪೂರ ಗ್ರಾಮಗಳಲ್ಲಿ ರಾಜ್ಯ ಸರ್ಕಾರ ನೇಮಿಸಿದ ಅಧ್ಯಯನ ತಂಡವು ವೀಕ್ಷಣೆ  ಯನ್ನು ಮಾಡಿತು.ರೈತರು ಬೆಳೆದ ಬೆಳೆಗಳನ್ನು ವೀಕ್ಷಣೆ ಮಾಡಿ ನಿರಂತರವಾಗಿ ಸುರಿದ ಮಳೆಯಿಂದ ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ, ಗೋವಿನಜೋಳ, ಶೇಂಗಾ ಇತರೆ ಬೆಳೆಗಳನ್ನು ವೀಕ್ಷಣೆ ಮಾಡಿದರು ಇದೇ ವೇಳೆ ತಾಲ್ಲೂಕಿನಲ್ಲಿರುವ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು 4,193 ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿದ್ದು

ಮೊದಲು ಸರ್ವೆ ಮಾಡಿ ತಾಲ್ಲೂಕು ಆಡಳಿತದಿಂದ ಜಿಲ್ಲಾ ಆಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸ ಲಾಗಿದ್ದು ಈ ಒಂದು ವರದಿಯ ಪ್ರಕಾರ ರೈತರಿಗೆ ಹೆಚ್ಚಿನ ಪರಿಹಾರ ಕೂಡಲೇ ಬಿಡಗುಡೆಯಾಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ನೇಮಿಸಿದ ಅಧ್ಯಯನ ಸಮಿತಿ ತಂಡದ ಮುಖ್ಯಸ್ಥೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶ್ರೀಮತಿ ಮಮತಾ ಗೌಡರ ಹಾಗೂ ತೋಟಗಾರಿಕೆ ಉಪನಿರ್ದೇಶಕಿ ಶ್ರೀಮತಿ ಭುವನೇಶ್ವರಿ ಅವರುಗಳಿಗೆ ತಾಲ್ಲೂಕಿನಲ್ಲಿ ಬೆಳೆ ಹಾನಿಯಾದ ಬಗ್ಗೆ ಅಧಿಕಾರಿಗಳು ಹಾಗೂ ರೈತರ ಜೊತೆ ಸೇರಿ ಮನವರಿಕೆ ಮಾಡಿ ತಕ್ಷಣ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ವರದಿ ನೀಡಿ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಎನ್ ಹೆಚ್ ಕೋನರಡ್ಡಿ ಯವರು ಒತ್ತಾಯಿಸಿದರು.

ಇದೇ ವೇಳೆ SDRF & NDRF ಮಾರ್ಗಸೂಚಿ ಅನ್ವಯದ ಪ್ರಕಾರ ರೈತರಿಗೆ ಬೆಳೆ ಪರಿಹಾರ ನೀಡಲು ಅಧ್ಯಯನ ತಂಡ ನಲವಡಿ, ಭದ್ರಾಪೂರ, ಮಜ್ಜಿಗುಡ್ಡ, ಬಸಾಪೂರ ಗ್ರಾಮದಲ್ಲಿ ಬೆಳೆಹಾನಿ ವೀಕ್ಷಿಸಲಾಯಿತು. ಈ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳ ತಂಡ ರಾಜ್ಯ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಪರಿಹಾರ ಸಿಗುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಾಲ್ಲೂಕಾ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ರೈತ ಮುಖಂಡರಾದ ಪ್ರದೀಪ ಲೆಂಕನ ಗೌಡ್ರ, ಶಿವಾನಂದ ಅಡಿವೆಪ್ಪ ತೊರವಿ, ದೇವನಗೌಡ ಪಾಟೀಲ, ಶಂಕರು ಶಿರಗುಪ್ಪಿ, ಎಸ್.ಬಿ. ಪಾಟೀಲ, ಬಸವರಾಜ ಕುಂದಗೋಳ, ಹೆಚ್.ಡಿ. ದೊಡ್ಡಗೌಡ್ರ, ಮೌಲಾ ದಾವಲಖಾನ, ಟಿ.ಎಸ್. ಯರಗುಪ್ಪಿ, ಶಂಕರ್ ಸಿರುಗುಪ್ಪಿ, ಬರಮಪ್ಪ ತೊರಿವಿ, ಶಿವಾನಂದ್ ತೋರವಿ, ಸುರೇಶ್ ತೊರಿವಿ, ಮಕ್ತುಮ ಸಾಬ್ ಬಾವಾಜಿ ರಫೀಕ್ ಹುಯಿಲಗೂಳ, ನಿಂಗಪ್ಪ ಶರಣಪ್ಪನವರ್,

ಬಾಳಾಜಿರಾವ ಮೋಹಿತೆ, ಉಮೇಶ ನವಲಗುಂದ, ಮಂಜುನಾಥ ಗಾಳಿ, ಮುತ್ತು ಸಂಗಳ, ರುದ್ರಪ್ಪ ಅಮ್ಮಿನಭಾವಿ, ಮಹಾದೇವ ತೋಟದ, ತವನಪ್ಪ ಜೀವನಗೌಡರ, ಸಿ.ಎನ್.ಪಡೆಸೂರ, ಬಾಳಾಜಿರಾವ ಮೋಹಿತೆ, ಉಮೇಶ ನವಲಗುಂದ, ಮಂಜುನಾಥ ಗಾಳಿ, ಮುತ್ತು ಸಂಗಳ, ರುದ್ರಪ್ಪ ಅಮ್ಮಿನಭಾವಿ, ಮಹಾದೇವ ತೋಟದ, ತವನಪ್ಪ ಜೀವನಗೌಡರ, ಸಿ.ಎನ್.ಪಡೆಸೂರ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.