ಬಸವನಬಾಗೇವಾಡಿ –
ಸಾವು ಯಾವ ಸಮಯದಲ್ಲಿ ಹೇಗೆ ಯಾವ ರೂಪ ದಲ್ಲಿ ಬರುತ್ತದೆ ಎಂಬೊದೆ ಗೊತ್ತಾಗೊದಿಲ್ಲ.ಹುಟ್ಟು ಮಾತ್ರ ನಮ್ಮ ಕೈಯಲ್ಲಿ ಸಾವು ಮಾತ್ರ ನಮ್ಮ ಕೈಯ ಲ್ಲಿ ಇಲ್ಲ ಎನ್ನೊದಕ್ಕೆ ಸಾವಿನಲ್ಲಿ ಒಂದಾದ ತಾಯಿ ಮಗನೇ ಸಾಕ್ಷಿ.ಹೌದು ದಶರಥ ಕಾಶಿನಾಥ ಮ್ಯಾಗೇ ರಿ ಪ್ರೌಢ ಶಾಲಾ ಶಿಕ್ಷಕರಾಗಿ ಕಾರವಾರದ ಶಿರ್ಶಿಯಲ್ಲಿ ಅನುದಾನಿತ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ದ್ದರು.ಶಾಲೆಗೆ ರಜೆ ಇದೆ ಎಂದುಕೊಂಡು ಶಿರಸಿಯಲ್ಲಿ ಪತ್ನಿಯ ಊರಿನಲ್ಲಿದ್ದರು.ಇತ್ತ ಬಾಗೇವಾಡಿಯ ಮಸಬಿನಾಳ ಗ್ರಾಮದವರಾಗಿದ್ದ ಇವರ ತಾಯಿಯ ವರಿಗೆ ಅನಾರೋಗ್ಯ ಹಿನ್ನಲೆಯಲ್ಲಿ ಕಳೆದ ವಾರ ಶಿರಸಿಯಿಂದ ತಾಯಿಯನ್ನು ಹಾರೈಕೆ ಮಾಡಲು ಊರಿಗೆ ಬಂದಿದರು.

ಬಂದ ನಂತರ ತಾಯಿಗೆ ಕೋವಿಡ್ ಪಾಸಿಟಿವ್ ಆಗಿ ರುವ ವಿಚಾರ ತಿಳಿದು ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತ್ತು.ನಂತರ ಇವರಿಗೂ ಅನಾರೋಗ್ಯ ಹಿನ್ನಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರ ಇವರಿಗೂ ಕೂಡಾ ಕೋವಿಡ್ ಕಂಡು ಬಂದಿದ್ದು ಹೀಗಾಗಿ ಒಂದು ಕಡೆ ಇವರ ತಾಯಿ ಲಲಿತಾಬಾಯಿ ಮತ್ತೊಂದು ಕಡೆ ದಶರಥ ಇವರಿಬ್ಬರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾ ಗಿದ್ದರು. ಇಬ್ಬರಿಗೂ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಚಿಕಿತ್ಸೆ ಫಲಿಸದೇ ಇಬ್ಬರು ಇಂದು ಸಾವಿಗೀಡಾಗಿ ದ್ದಾ ರೆ.

ಇನ್ನೂ ಸಾವಿನಲ್ಲೂ ತಾಯಿ ಮಗ ಒಂದಾಗಿದ್ದು ಇಬ್ಬ ರನ್ನು ಕಳೆದುಕೊಂಡಿರುವ ಮಸಬಿನಾಳ ಗ್ರಾಮ ಮತ್ತು ಕುಟುಂಬದವರಿಗೆ ತುಂಬಲಾರದ ಹಾನಿಯಾ ಗಿದ್ದು ಗ್ರಾಮವೇ ಕಂಬನಿ ಮೀಡಿಯುತ್ತಿದ್ದು ಇನ್ನೂ ಮೃತರಾದ ಶಿಕ್ಷಕ ದಶರಥ ಮತ್ತು ಅವರ ತಾಯಿಯ ವರಿಗೆ ನಾಡಿನ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.ಹನಮಂತ ಬೂದಿಹಾಳ,ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ,ಎಲ್ ಐ ಲಕ್ಕಮ್ಮನ ವರ,ಶರಣಬಸವ ಬನ್ನಿಗೊಳ,ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನ ವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲ ವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ,ರುಸ್ತಂ ಕನವಾಡೆ,ಬಿ ವಿ ಪ್ರೇಮಾ ವತಿ, ಕೀರ್ತಿವತಿ ವಿ ಎನ್,ಜೆ ಟಿ ಮಂಜುಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂ ರು,ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ,ಲಕ್ಷ್ಮೀದೇವಮ್ಮ,ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಅಶೋಕ ಸಜ್ಜನ, ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ