ಶಾಲೆಗೆ ತೆರಳುವಾಗ ಶಿಕ್ಷಕನಿಗೆ ಹೃದಯಾಘಾತ – ಬೈಕ್ ನಲ್ಲಿ ಹೊರಟಿದ್ದ ಶಿಕ್ಷಕ…..ಶಿಕ್ಷಕರಿಗೆ ಹೆಚ್ಚಾಗುತ್ತಿದೆ ಕೆಲಸದ ಒತ್ತಡ‌‌‌‌…..

Suddi Sante Desk
ಶಾಲೆಗೆ ತೆರಳುವಾಗ ಶಿಕ್ಷಕನಿಗೆ ಹೃದಯಾಘಾತ – ಬೈಕ್ ನಲ್ಲಿ ಹೊರಟಿದ್ದ ಶಿಕ್ಷಕ…..ಶಿಕ್ಷಕರಿಗೆ ಹೆಚ್ಚಾಗುತ್ತಿದೆ ಕೆಲಸದ ಒತ್ತಡ‌‌‌‌…..

ಶಿವಮೊಗ್ಗ

ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರು ಹಠಾತ್ತನೆ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಆನಂದಪುರಲ್ಲಿ ನಡೆದಿದೆ ನರಸೀಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಮಂಜುನಾಥ್( 57) ಮೃತಪಟ್ಟ ಶಿಕ್ಷಕರಾಗಿದ್ದಾರೆ.

ಜಂಬೆಕೊಪ್ಪ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವ ಹಿಸಲು ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮಂಜುನಾಥ್ ಅವರು ಹೆಂಡತಿ, ಓರ್ವ ಪುತ್ರ, ಪುತ್ರಿ, ಹಾಗೂ ಅಪಾರ ಶಿಕ್ಷಕ ವರ್ಗದವರನ್ನು ಅಗಲಿದ್ದಾರೆ.

ಶಿಕ್ಷಕ ಮಂಜುನಾಥ್ ಮನೆಗೆ ಸಾಗರ ಕ್ಷೇತ್ರ ಶಿಕ್ಷಣಾಧಿ ಕಾರಿಗಳು,ಶಿಕ್ಷಕರು ಸೇರಿದಂತೆ ಹಲವರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.ಸರ್ಕಾರಿ ಶಾಲೆಯ ಲ್ಲಿನ ಶಾಲಾ ಶಿಕ್ಷಕರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಶಿಕ್ಷಕರು ಶಾಲೆಗೆ ತೆರಳು ತ್ತಿದ್ದಂತೆ ಮಕ್ಕಳಿಗೆ ರಾಗಿ ಮಾಲ್ಟ್, ನಂತರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ತಿನ್ನುವ ಮಕ್ಕಳ ಸಂಖ್ಯೆ, ಬಾಳೆಹಣ್ಣು ತಿನ್ನುವ ಮಕ್ಕಳ ಸಂಖ್ಯೆಯ ಮಾಹಿತಿ ಸಂಗ್ರಹಿಸಿ ಶಿಕ್ಷಣ ಇಲಾಖೆಗೆ ಕಳಿಸು ವೇಳೆಗಾಗಲೇ ಅರ್ಧ ದಿನ ಕಳೆದು ಹೋಗಿರುತ್ತದೆ.

ಈ ಒತ್ತಡದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲಾಗದೆ ಎಲ್ಲಾ ದೃಷ್ಟಿಯಿಂದ ಮಾನಸಿಕವಾಗಿ ಒತ್ತಡ ಅನುಭವಿಸುತ್ತಿದ್ದಾರೆ. ಇದರಿಂದ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತ, ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.