ಬೆಂಗಳೂರು –
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿಗೆ ಮತ್ತೊರ್ವರು ಬಲಿಯಾಗಿದ್ದು ರಸ್ತೆಯಲ್ಲಿನ ಗುಂಡಿಯಿಂದಾಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಶಿಕ್ಷಕಿಯೊಬ್ಬರ ಮೇಲೆ ವಾಹನ ಹರಿದಿದ್ದು ಸ್ಥಳದಲ್ಲೇ ಶಿಕ್ಷಕಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಬ್ಯಾಡರಹಳ್ಳಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಶರ್ಮಿಳಾ ಸಾವಿಗೀಡಾಗಿದ್ದು ಇನ್ನೂ ಇವರ ಪತಿ ಪ್ರಕಾಶ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೂ ಶರ್ಮಿಳಾ-ಪ್ರಕಾಶ್ ದಂಪತಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಂಜನನಗರ ಬಳಿ ಈ ಅವಘಡ ಉಂಟಾಗಿದೆ.ರಸ್ತೆಯಲ್ಲಿ ಪೈಪ್ ಲೈನ್ ಕಾಮಗಾರಿಗೆಂದು ಅಗೆದು ಗುಂಡಿ ಉಂಟಾಗಿದ್ದು ಅದನ್ನು ದುರಸ್ತಿಗೊಳಿಸಿಲ್ಲ ಇದರಿಂದಾಗಿ ದ್ವಿಚಕ್ರವಾಹನ ಆಯತಪ್ಪಿದ್ದು ಕೂಡಲೇ ಶಿಕ್ಷಕಿ ಕೆಳಗೆ ಬಿದ್ದಿದ್ದಾರೆ.ಅವರ ಮೇಲೆ ಬೊಲೆರೊ ವಾಹನ ಸಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ವಿಜಯನಗರ ಸಮೀಪದ ಮೂಡಲ ಪಾಳ್ಯದಿಂದ ಮಾದ ನಾಯಕನಹಳ್ಳಿಯಲ್ಲಿರುವ ಸಹೋದರನ ಮನೆಗೆ ಪತಿ ಯೊಂದಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಗುಂಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿ ಸಿದ್ದು ಸಂಬಂಧಿತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದು ಇತ್ತ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.