ಬೀದರ್ –
ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಹೊಡೆದು ಸುಟ್ಟು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.ಔರಾದ ಪಟ್ಟಣ ದಲ್ಲಿನ ಸರ್ಕಾರಿ ಶಿಕ್ಷಕನ ಬರ್ಬರ ಕೊಲೆಯಾಗಿದೆಪಟ್ಟಣದ ಹೊರವಲಯದ ಕೃಷಿ ತರಬೇತಿ ಕೇಂದ್ರದಲ್ಲಿನ ಸಮೀಪ ಶಿಕ್ಷಕನ ಬರ್ಬರ ಕೊಲೆಯನ್ನು ಮಾಡಲಾಗಿದೆ.
ಪಟ್ಟಣದ ಲಿಡ್ಕರ್ ಕಾಲೋನಿಯ ನಿವಾಸಿ ವಿಜಯ ಕುಮಾರ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರಂತೆ.ಯಾರೊ ಅಪರಿಚಿತರು ಈ ಸರ್ಕಾರಿ ಶಾಲೆ ಶಿಕ್ಷಕ ವಿಜಯಕುಮಾರ್ ನನ್ನು ಕೊಲೆ ಮಾಡಿದ್ದಾರಂತೆ
ಔರಾದ ತಾಲೂಕಿನ ಕರಂಜಿ (ಕೆ) ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕ ವಿಜಯಕುಮಾರ್ ಆಗಿದ್ದಾರೆ. ಮೃತ ದುರ್ದೈವಿ ವಿಜಯಕುಮಾರ ಮುಖಕ್ಕೆ ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಹೊಡೆದು ಭೀಕರ ವಾಗಿ ಕೊಲೆ ಮಾಡಲಾಗಿದೆ
ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಔರಾದ ಪೊಲೀಸ್ ಠಾಣೆ ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲೆಯಾದ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿ ದ್ದಾರೆ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ