ಚುನಾವಣಾ ತರಬೇತಿ ಬಂದಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು – ಶಿಕ್ಷಕನ ಸಾವಿಗೆ ಕಂಬನಿ ಮಿಡಿದ ನಾಡಿನ ನೌಕರರು…..

Suddi Sante Desk
ಚುನಾವಣಾ ತರಬೇತಿ ಬಂದಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು – ಶಿಕ್ಷಕನ ಸಾವಿಗೆ ಕಂಬನಿ ಮಿಡಿದ ನಾಡಿನ ನೌಕರರು…..

ದಾವಣಗೆರೆ

ಚುನಾವಣಾ ತರಬೇತಿ ಗೆ ಬಂದಿದ್ದ ಶಿಕ್ಷಕ ರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.ದಾವಣಗೆರೆ ತಾಲೂಕಿನ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ತರಬೇತಿ ಪಡೆಯಲು ಬಂದಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ

ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ಶ್ರೀನಿವಾಸ್(41)ಮೃತಪಟ್ಟ ಶಿಕ್ಷಕರಾಗಿದ್ದು ಸಂತೆ ಬೆನ್ನೂರು ವಿಜಯಪ್ರೌಢಶಾಲೆಯಲ್ಲಿ 14 ವರ್ಷ ಗಳಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿ ದ್ದರು.ತಾಲೂಕು ಆಡಳಿತ ವತಿಯಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಪಿಆರ್‌ಓ ಮತ್ತು ಎಪಿಆರ್‌ ಓಗಳಿಗೆ ಚುನಾವಣಾ ಮತದಾನ ಮತ್ತು ಮತ ಯಂತ್ರಗಳ ಕುರಿತ ಮೊದಲ ಹಂತದ ತರಬೇತಿ ನಡೆಯುತ್ತಿತ್ತು.

ಮೊದಲ ಹಂತದ ತರಬೇತಿ ಪಡೆದ ಶಿಕ್ಷಕ ಸ್ನೇಹಿತ ರೊಂದಿಗೆ ಮಾತನಾಡುತ್ತಾ ನಿಂತಿದ್ದ ವೇಳೆ ಕುಸಿದುಬಿದ್ದಿದ್ದಾರೆ.ತಕ್ಷಣ ಸಹಶಿಕ್ಷಕರು ಮತ್ತು ತಾಲೂಕು ಕಚೇರಿ ಸಿಬ್ಬಂದಿ ಎಚ್ಚರ ತಪ್ಪಿದ್ದಾರೆಂ ದು ತಿಳಿದು ಕೂರಿಸಲು ಪ್ರಯತ್ನಿಸಿದ್ದಾರೆ. ಇವರ ಜೊತೆ ತಹಸೀಲ್ದಾರ್ ಎರ್ರಿಸ್ವಾಮಿ ಸ್ಥಳಕ್ಕೆ ಆಗಮಿಸಿ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಡಿಸಿ ಮತ್ತು ಚುನಾವಣಾ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.