ಲಿಂಗಸುಗೂರು –
ಈಗಾಗಲೇ ಮಹಾಮಾರಿಯ ಲಾಕ್‌ಡೌನ್‌ನಿಂದಾಗಿ ಶಾಲೆಗಳು ಬಂದ್ ಆಗಿದ್ದು ಮಕ್ಕಳ ಕಲಿಕೆ ಕುಂಠಿತ ಗೊಂಡಿದೆ.ಇಂತಹ ಸಂದರ್ಭದಲ್ಲಿ ರಾಯಚೂರಿನ ಕೆಸರಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರು ಮಕ್ಕಳಿಗೆ ಪತ್ರ ಬರೆದು ಕಲಿಕೆಗೆ ಉತ್ತೇಜಿಸುವ ಮೂಲಕ ಪಾಲಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ 195 ಮಕ್ಕಳಿಗೆ ಮುಖ್ಯಗುರು ರಾಚನಗೌಡ ಹಿರಿಯ ಶಿಕ್ಷಕ ಚಂದ್ರಶೇಖರಪ್ಪ ಮತ್ತು ಸಹ ಶಿಕ್ಷಕರು ಅಕ್ಕರೆಯ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿ ದ್ದಾರೆ.

ಪ್ರೀತಿಯ ಮುದ್ದು ಮಕ್ಕಳೇ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದ್ದು ನೋವಾಗಿದೆ.ಆದರೆ, ಶಾಲಾರಂ ಭಕ್ಕೆ ಹಸಿರು ನಿಶಾನೆ ಸಿಕ್ಕಿರುವುದು ಸಂತೋಷ ವಾಗಿದೆ.ಅಲ್ಲಿವರೆಗೆ ಮನೆಯಲ್ಲೇ ಇದ್ದು, ಕುಟುಂಬ ದೊಂದಿಗೆ ಉತ್ತಮ ಆಹಾರ ಸೇವನೆ ಮಾಡಬೇಕು.

ಯೋಗ ವ್ಯಾಯಾಮ ಅಭ್ಯಾಸ ಮಾಡಿ.ರಜೆ ಇದ್ದ ರೂ ಬಿಸಿಯೂಟದ ಆಹಾರ ಸಾಮಗ್ರಿ ಪಡೆಯ ಬೇಕು.ಶಾಲೆಯಿಲ್ಲವೆಂದು ಕೊರಗದೆ ಕಲಿಕೆಗೆ ಉತ್ಸು ಕರಾಗಿರಬೇಕು.ಆಫ್‌ಲೈನ್,ದೂರದರ್ಶನ, ಸಂವೇ ದಿ,ಬಾನುಲಿ ಯೂಟ್ಯೂಬ್, ವಾಟ್ಸ್ ಆಪ್, ಟ್ಯಾಬ್, ರೇಡಿಯೋ, ದೂರದರ್ಶನ ಮುಖೇನ ಕಲಿಕೆ ನಿರಂತ ರವಾಗಿರಲಿ.

ಮುಗ್ಧ ಮನಸ್ಸಿನ ಹೂವುಗಳು ನೀವು ತಂದೆ ತಾಯಿಗಳ ಹೆಮ್ಮೆಯ ಮಕ್ಕಳಾಗಿ ಭಾರತದ ರತ್ನಗ ಳಾಗಿ ಕರೊನಾದಿಂದ ಎಚ್ಚರ ವಹಿಸಿ ಎಂದು ಪತ್ರದ ಲ್ಲಿ ಶಿಕ್ಷಕರು ಧೈರ್ಯ ತುಂಬಿ ಹಾರೈಸಿದ್ದಾರೆ.

ಪತ್ರ ಸಂಸ್ಕೃತಿ ಉಳಿಸಿ ಬೆಳೆಸುವ ಜತೆಗೆ ಮಕ್ಕಳಿಗೆ ಕರೊನಾ ಜಾಗೃತಿ ಮೂಡಿಸುವುದು ಕಲಿಕೆಗೆ ಉತ್ತೇ ಜಿಸಲು ಅಂಚೆ ಮೂಲಕ ಪತ್ರ ಬರೆಯಲಾಗಿದೆ. ಮಕ್ಕಳ ಮತ್ತು ಶಿಕ್ಷಕರ ಮಧ್ಯೆ ಕಡಿತಗೊಂಡಿದ್ದ ಸಂಪರ್ಕ ಸಾಧ್ಯವಾಗಿದೆ ಎಂದು ಪತ್ರ ಬರೆದು ಮಕ್ಕಳ ಕುಶಲೋಪರ ವಿಚಾರಿಸಿ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಇಂತಿ ನಿಮ್ಮ ರಾಚನಗೌಡ, ಮುಖ್ಯಗುರು, ಸ.ಹಿ.ಪ್ರಾ.ಶಾಲೆ, ಕೆಸರಟ್ಟಿ.