ಸಿರಿಗೆರೆ –
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಲೆ ಇದೆ.ನೆತ್ತಿ ಸುಡುವ ಈ ಒಂದು ರಣ ಬಿಸಿಲಿಗೆ ಬಸವ ಳಿಯುತ್ತಿರುವ ಪಕ್ಷಗಳಿಗೆ ಇಲ್ಲೊಬ್ಬ ಶಿಕ್ಷಕ ರೊಬ್ಬರು ನೀರುಣಿಸುವ ಮೂಲಕ ಮೂಕ ಜೀವಿಗಳ ವೇದನೆ ಗೆ ಮಾನವೀಯತೆ ಮೆರೆದಿದ್ದಾರೆ.
ಹೌದು ಚಿತ್ರದುರ್ಗ ತಾಲೂಕಿನ ಅಳಗವಾಡಿ ಗ್ರಾಮ ದ ಶ್ರೀಶರಣ ಎಂ.ಗಂಗಾಧರಯ್ಯ ಗ್ರಾಮಾಂತರ ಪ್ರೌಢಶಾಲೆಯ ಹಿಂದಿ ಶಿಕ್ಷಕ ಸಿ.ಸದಾನಂದಪ್ಪ, ಬಿಸಿಲಿನ ಕಾವಿಗೆ ನಿತ್ರಾಣ ಗೊಂಡು ಕುಡಿಯುವ ನೀರು ಸಿಗದೆ ಬಳಲುವುದ ನ್ನು ಗಮನಿಸಿ ಕುಡಿಯು ವ ನೀರಿನ ಬಾಟಲ್ ಸಂಗ್ರಹಿಸಿ ಮರಗಳಿಗೆ ಕಟ್ಟಿ ಬಾಟಲ್‌ನಲ್ಲಿ ನೀರು ಹಾಕಿ ಆ ಮೂಲಕ ಬಿಸಿಲಿನಿಂ ದ ಬಳಲಿ ಬರುವ ಪಕ್ಷಗಳಿಗೆ ಪ್ರತಿನಿತ್ಯ ನೀರುಣಿಸು ತ್ತಿದ್ದಾರೆ.
ಪರಿಸರ ಪ್ರೇಮಿ ಹಾಗೂ ಪರಿಸರ ಶಿಕ್ಷಕ ಮಲ್ಲಪ್ಪ ಅವರ ಕಾಳಜಿಯಿಂದ ಗಿಡ ನೆಟ್ಟು ಸಂರಕ್ಷಿಸಿದ ಪರಿಣಾಮ ಶಾಲಾ ಆವರಣದಲ್ಲಿ ಇಂದು ನೂರಾರು ಮರಗಳು ಬೆಳೆದು ನಿಂತು ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ.ಆಹಾರ ಅರಸಿ ಬೇರೆ ಕಡೆ ತೆರಳಿ ಇಲ್ಲಿನ ಮರಗಳಲ್ಲಿ ಆಶ್ರಯ ಪಡೆದಿರುವ ಪಕ್ಷಿಗಳು ರಣ ಬಿಸಿಲಿಗೆ ನೀರಿಲ್ಲದೆ ನಿತ್ರಾಣಗೊಂಡು ವಿಲವಿಲ ನೇ ಒದ್ದಾಡುತ್ತಿರುವುದನ್ನು ಗಮನಿಸಿದ ಶಿಕ್ಷಕ ಸದಾನಂದಪ್ಪ, ನೂರಾರು ಕುಡಿಯುವ ಬಾಟಲ್ ಸಂಗ್ರಹಿಸಿ ಮರಗಳಿಗೆ ಕಟ್ಟಿ ಪ್ರತಿನಿತ್ಯ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ.
ಇವರಿಗೆ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಶಿಕ್ಷಕರಾದ ಮಲ್ಲಪ್ಪ, ಗುರುಮೂರ್ತಿ, ದೇವರಾಜ್ ಸಾಥ್ ನೀಡಿದ್ದಾರೆ. ಮಕ್ಕಳಿಗೆ ಬೋಧನೆ ಮಾಡುವ ಜೊತೆಗೆ ಪಕ್ಷಿಗಳಿಗೆ ನೀರುಣಿಸುವ ಮೂಲಕ ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.