ಬೆಟ್ಟದಪುರ –
ಹೌದು ಸಮೀಪದ ಹಾರನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಜೆಪಾಲ್ ಸಂಶೋಧನಾ ಮೌಲ್ಯಮಾಪಕರ ತಂಡ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮೌಲ್ಯಮಾಪನ ನಡೆಸಿದರು ಬೆಳಿಗ್ಗೆಯಿಂದ ಸಂಜೆವರೆಗೆ ಪೂರ್ವ ಪ್ರಾಥಮಿಕ ತರಗತಿ ಗಳಾದ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳೊಂದಿಗೆ ಪ್ರಶ್ನೆಗಳು ಹಾಗೂ ಆಟಗಳ ಮೂಲಕ ಪ್ರತಿ ಮಗುವಿನ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಮಾಡಿದರು.
ಶಾಲಾ ಕಚೇರಿಯಲ್ಲಿ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರು ಯೋಜನೆಯ ವ್ಯವಸ್ಥಾಪಕ ಯಲ್ಲಪ್ಪ ಮಾತನಾಡಿ, ‘ಸಮಗ್ರ ಶಿಕ್ಷಣ ಕರ್ನಾಟಕ ಆದೇಶದ ಮೇರೆಗೆ ಜೆಪಾಲ್ ಸಂಶೋಧನಾ ಸಂಸ್ಥೆ ಹಾಗೂ ಕೀ ಎಜುಕೇಶನ್ ಸಹಭಾಗಿತ್ವದಲ್ಲಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ವೈಯಕ್ತಿಕ ಮೌಲ್ಯಮಾಪನ ನಡೆಸಿ ಮೇಲ್ವಿಚಾರಣೆ ಮಾಡಲಾಗಿದೆ.
ಶಾಲೆಯಲ್ಲಿ ಎಲ್ಲರೊಂದಿಗೆ ಬಿಸಿಯೂಟ ಸವಿಯ ಲಾಗಿದ್ದು ಶಾಲಾವರಣದಲ್ಲಿ ಶುಚಿತ್ವ ಕಾಪಾಡಿಕೊಂಡು ಬರುತ್ತಿದ್ದಾರೆ’ ಎಂದು ಹೇಳಿದರು.ಶಾಲೆಯ ಮುಖ್ಯಶಿಕ್ಷಕ ಕೆ.ಸಿ.ಸತೀಶ್, ಮೌಲ್ಯಮಾಪಕರ ತಂಡದ ಭಾಸ್ಕರ್, ಡಿ.ಸುಮಾ, ಸಂಜೀವಿನಿ, ಪವಿತ್ರಾ, ಸುನೀತಾ, ಗ್ರಾಮದ ಮುಖಂಡರಾದ ಎಚ್.ಟಿ.ಗೋವಿಂದೇಗೌಡ, ನಾರಾಯ ಣಗೌಡ, ಶಿಕ್ಷಕರಾದ ಎಂ.ವಿದ್ಯಾಶ್ರೀ, ಸಾಜಿಯ ಪರ್ವೀನ್, ಉಮಾಶ್ರೀ, ಚಂದ್ರಶೇಖರ್, ನಾಗರತ್ನ, ರುಕ್ಮಿಣಿ, ಸ್ವಾತಿ, ನಂದಿನಿ, ಜಬಿನ ಬಿಬಿ, ಯಶೋದಮ್ಮ ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಟ್ಟದಪುರ…..