ಬೆಂಗಳೂರು –
ರಾಜ್ಯದ ಶಿಕ್ಷಕರ ಕೆಲವು ವಿಚಾರ ಗಳ ಕುರಿತು ರಾಜ್ಯದ ಗ್ರಾಮೀಣ ಶಿಕ್ಷಕರ ಸಂಘದವರು ರಾಜ್ಯದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ ದರು.ಹೌದು ಹೆಚ್ಚುವರ ಶಿಕ್ಷಕರ ಪಟ್ಟಿಯನ್ನು 31-11-2022 ರಲ್ಲಿ ಇದ್ದಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸುವ ಕುರಿತು ಮನವಿ ಯನ್ನು ಸಲ್ಲಿಸಲಾಯಿತು.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿಯ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ.
2022-23 ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಅದರಲ್ಲಿ ಹೆಚ್ಚುವರಿ ಶಿಕ್ಷಕರ ಗುರುತಿಸುವಲ್ಲಿ 31-12-2021 ರಲ್ಲಿ ಇದ್ದಂತೆ ಮಕ್ಕಳ ಸಂಖ್ಯೆಗೆ ಅನು ಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿದ್ದು 2022-23 ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಹೆಚ್ಚುವರಿ ಶಿಕ್ಷಕರ ಗುರುತಿಸುವಲ್ಲಿ 31-11-2022 ರಲ್ಲಿ ಇದ್ದಂತೆ ಮಕ್ಕಳ ಸಂಖ್ಯೆಗೆ ಅನು ಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿದರೆ ಶಿಕ್ಷಕ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಯಾವುದೇ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಾ ಗದೆ ಮಕ್ಕಳ ಗುಣಾತ್ಮಕ ಶಿಕ್ಷಣ ನೀಡಲು ಅವಕಾಶ ಸಿಗುತ್ತದೆ.
ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 7 ತರಗತಿಗಳಿಗೆ ದೈಹಿಕ ಶಿಕ್ಷಣ ವಿಷಯದ ಪಠ್ಯ ಪುಸ್ತಕ ಇದ್ದು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ ಇಂತಹ ಪರಿಸ್ಥಿತಿ ಇರುವಾಗ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚವರಿ ಮಾಡಿರುವ ಕ್ರಮ ಅವೈಜ್ಞಾನಿಕವಾಗಿದೆ ಆದ್ದರಿಂದ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚವರಿ ಮಾಡಿದಂತೆ ವಿನಂತಿ ಸಿಕೊಳ್ಳುತ್ತೇವೆ.
ಹೆಚ್ಚವರಿ ಶಿಕ್ಷಕರನ್ನು ಗುರುತಿಸುವಾಗ ಕನಿಷ್ಠ 3 ವರ್ಷ ಒಂದು ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ರನ್ನು ಮಾತ್ರ ಗುರುತಿಸಲು ವಿನಂತಿ ಏಕೆಂದರೆ 8 ತಿಂಗಳ ಹಿಂದೆ ಕೋರಿಕೆ ವರ್ಗಾವಣೆ ಹೊಂದಿ ರುವ ಶಿಕ್ಷಕರು ಈಗ ಹೆಚ್ಚವರಿ ಪಟ್ಟಿಯಲ್ಲಿ ಇದ್ದಾರೆ
ಆದ್ದರಿಂದ ಮಾನ್ಯರವರು ನಮ್ಮ ಸಂಘದ ಮೇಲಿನ ಮನವಿಗಳನ್ನು ಪರಿಗಣಿಸಿ ಹೆಚ್ಚುವರಿ ಪ್ರಕ್ರಿಯೆ ನಡೆಸುವ ಮೂಲಕ ಅನುಕೂಲ ಮಾಡಿ ಕೊಡಲು ವಿನಂತಿ.
ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಬಹು ಮಹಡಿ ಕಟ್ಟಡ ಬೆಂಗಳೂರು ಇವರಿಗೆ……