ರಾಜೀನಾಮೆ ನೀಡಿದ ಶಿಕ್ಷಕಿಯ ಬೆನ್ನಿಗೆ ನಿಂತ ಮಹಿಳಾ ಶಿಕ್ಷಕಿಯರ ಟೀಮ್ – ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಸ್ಪಂದನೆ…..

Suddi Sante Desk

ಧಾರವಾಡ –

ವರ್ಗಾವಣೆಯಲ್ಲಿ ಅವಕಾಶ ಅನುಕೂಲ ಸಿಗದ ಹಿನ್ನಲೆ ಯಲ್ಲಿ ರಾಯಚೂರು ಜಿಲ್ಲೆಯ ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಕ್ಷತಾ ಬಿ ಅವರು ರಾಜೀನಾಮೆ ನೀಡಿದ್ದಾರೆ.2010 ರಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿರುವ ಇವರು ನಂತರ ಶಾಲೆಗೆ ಹೋಗುವ ಸಮಯದಲ್ಲಿ ಅಪಘಾತವಾಗಿದ್ದು ಸಧ್ಯ ಎರಡು ಚಿಕಿತ್ಸೆಗಳು ಕೂಡಾ ಆಗಿದ್ದು ಹೀಗಾಗಿ ಸ್ವತಃ ಊರು ಬೀದರ್ ಆಗಿದ್ದು ರಾಯಚೂರಿನಲ್ಲಿ ಕರ್ತವ್ಯವನ್ನು ಮಾಡುತ್ತಿದ್ದು ಆಪರೇಶನ್ ಆದ ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ತಾತ್ಕಾಲಿಕವಾಗಿ ವರ್ಗಾವಣೆಗೆ ಸೂಚಿಸಲಾಗಿತ್ತು ಆದರೂ ಕೂಡಾ ಅಧಿಕಾರಿಗಳು ಅನುಕೂಲ ಮಾಡದ ಕಾರಣಕ್ಕಾಗಿ ಈವರಗೆ ಕಾದು ಕಾದು ಅಲ್ಲದೇ ವರ್ಗಾವಣೆಯಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಕೊನೆಗೆ ಸಧ್ಯ ವೃತ್ತಿಗೆ ರಾಜೀನಾಮೆಯನ್ನು ನೀಡಿದ್ದಾರೆ.

ಈ ಕುರಿತಂತೆ ರಾಯಚೂರಿಗೆ ಬಿಇಓ ಅವರಿಗೆ ರಾಜೀನಾ ಮೆಯ ಪತ್ರವನ್ನು ಬರೆದಿದ್ದು ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ವರದಿಯನ್ನು ಪ್ರಕಟ ಮಾಡುತ್ತಿದ್ದಂತೆ ಈ ಒಂದು ಸುದ್ದಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದವರು ಸ್ಪಂದಿಸಿದ್ದಾರೆ.ಸಂಘದ ಸಂಸ್ಪಾಪಕ ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರು

ಕೂಡಲೇ ರಾಯಚೂರು ಮತ್ತು ಬೀದರ್ ಜಿಲ್ಲಾಧ್ಯಕ್ಷರಿಗೆ ಈ ಕುರಿತಂತೆ ದೂರವಾಣಿಯನ್ನು ಮಾಡಿ ಶಿಕ್ಷಕಿ ಶ್ರೀಮತಿ ಅಕ್ಷತಾ ಅವರನ್ನು ಸಂಪರ್ಕ ಮಾಡಿ ಸಮಸ್ಯೆ ಕುರಿತಂತೆ ಮಾತನಾಡುವಂತೆ ಸೂಚನೆ ನೀಡಿದರು.ರಾಯಚೂರು ಜಿಲ್ಲಾಧ್ಯಕ್ಷರಾಗಿರುವ ಶ್ರೀಮತಿ ಛಾಯಾ ಅವರು ಶಿಕ್ಷಕಿ ಕರ್ತವ್ಯ ಮಾಡುತ್ತಿರುವ ಶಾಲೆಯ ಪ್ರಧಾನ ಗುರುಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸುಧೀರ್ಘವಾಗಿ ಮಾತನಾಡಿ ಸಮಸ್ಯೆ ಕುರಿತಂತೆ ಸಮಗ್ರವಾದ ಮಾಹಿತಿ ಯನ್ನು ಪಡೆದುಕೊಂಡು ಈ ಒಂದು ಪ್ರಕರಣದಲ್ಲಿ ಶಿಕ್ಷಕಿಗೆ ನೆರವಾಗುವಂತೆ ಹೇಳಿದರು.

ಇನ್ನೂ ಇತ್ತ ಬೀದರ್ ಜಿಲ್ಲಾಧ್ಯಕ್ಷರಾಗಿರುವ ಶ್ರೀಮತಿ ಸಾರಿಕಾ ಗಂಗಾ ಅವರು ಕೂಡಾ ಶಿಕ್ಷಕಿಯವರ ದೂರ ವಾಣಿಯನ್ನು ಪಡೆದುಕೊಂಡು ಸುಧೀರ್ಘವಾಗಿ ಮಾತ ನಾಡಿ ಸಮಸ್ಯೆಯನ್ನು ಆಲಿಸಿ ನಿಮ್ಮೊಂದಿಗೆ ನಾವು ನಮ್ಮ ಶಿಕ್ಷಕಿಯರ ಸಂಘ ಇದೆ ರಾಜ್ಯಾಧ್ಯಕ್ಷರು ಇದ್ದಾರೆ ಯಾವು ದಕ್ಕೂ ವಿಚಾರ ಮಾಡಬೇಡಿ ನಿಮ್ಮ ನಿರ್ಧಾರವನ್ನು ಹಿಂದೆ ತಗೆದುಕೊಳ್ಳಿ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಧೈರ್ಯದ ಮಾತನ್ನು ಹೇಳಿದರು.

ರಾಯಚೂರು ಮತ್ತು ಬೀದರ್ ಜಿಲ್ಲಾಧ್ಯಕ್ಷರ ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡು ಹಿರಿಯ ಅಧಿಕಾರಿಗ ಳೊಂದಿಗೆ ಮಾತನಾಡುವ ಮಾತನ್ನು ಸುದ್ದಿ ಸಂತೆಗೆ ಸಂಘದ ರಾಜ್ಯಾಧ್ಯಕ್ಷರಾಗಿರುವ ಡಾ ಲತಾ ಎಸ್ ಮುಳ್ಳೂರು ಅವರು ನೀಡಿದರು.ಒಟ್ಟಾರೆ ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿಯಿಂ ದಾಗಿ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ನೊಂದುಕೊಂ ಡಿದ್ದು ಬೇಸರದ ಸಂಗತಿಯಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.