ತುಮಕೂರು –
ಎಲ್ಲಾ ಕಡೆಗಳಂತೆ ಆ ಸರ್ಕಾರಿ ಶಾಲೆಯಲ್ಲೂ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯೊತ್ಸವದ ಕಾರ್ಯಕ್ರಮ ಆಚರಣೆಗೆ ಸಿದ್ದತೆ ಮಾಡಲಾಗುತ್ತಿತ್ತು ಶಿಕ್ಷಕರು ಆಗಷ್ಟೇ ಬಂದಿದ್ದು ಇನ್ನೂ ವಿದ್ಯಾರ್ಥಿಗಳು ಕೂಡಾ ಬಂದು ಅವರು ಕೂಡಾ ಶಿಕ್ಷಕರೊಂದಿಗೆ ಸಿದ್ದತೆಯಲ್ಲಿ ತೊಡಗಿದ್ದರು.ಇನ್ನೇನು ಎಲ್ಲಾ ಸಿದ್ದತೆ ಮಾಡಿಕೊಂಡು ಧ್ವಜವನ್ನು ನಿಲ್ಲಿಸಬೇಕು ಎನ್ನುವಷ್ಟ ರಲ್ಲಿಯೇ ನಡೆದಿದ್ದು ದೊಡ್ಡ ದುರಂತ.

ಇಂಥದೊಂದು ದೊಡ್ಡ ಪ್ರಮಾಣದ ದುರಂತ ವೊಂದು ತುಮಕೂರಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.ತಾಲೂಕಿನ ಕರೀಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದೇ ದುರಂತ ಘಟನೆಯೊಂದು ನಡೆದಿದೆ

ಧ್ವಜಸ್ತಂಭ ನಿಲ್ಲಿಸುವ ವೇಳೆ ಮೂವರು ಬಾಲಕರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗಾಯಗೊಂ ಡಿದ್ದು ಅದರಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಶಶಂಕ್ ( 16), ಪವನ್ ( 22), ಚಂದನ್ (16) ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗಾಯಗೊಂ ಡಿದ್ದು ಇದರಲ್ಲಿ ಚಂದನ್ ಮೃತಪಟ್ಟಿದ್ದಾನೆ. ಗಾಯ ಗೊಂಡವರನ್ನು ತುಮಕೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ಮೂವರಿಗೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಇದೇ ವೇಳೆ ಖಾಸಗಿ ಆಸ್ಪತ್ರೆಗೆ ಡಿಡಿಪಿಐ ನಂಜಯ್ಯ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು ಮೃತರ ಕುಟುಂಬಕ್ಕೆ ಇಲಾಖೆ ಯಿಂದ ಆರ್ಥಿಕ ನೆರವು ನೀಡುತ್ತೇವೆ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಇಲಾಖೆ ಭರಿಸುತ್ತದೆ ಎಂದು ಡಿಡಿಪಿಐ ನಂಜಯ್ಯ ಭರವಸೆ ನೀಡಿದ್ದಾರೆ.
