ಬೆಂಗಳೂರು –
ಸಾಮಾನ್ಯವಾಗಿ ಯಾವುದೇ ವರ್ಗಾವಣೆ ಪ್ರಕ್ರಿಯೆ ಯನ್ನು ಆಯಾ ಇಲಾಖೆಯವರು ಎಷ್ಟೋ ಸಿಬ್ಬಂದಿ ಗಳು ನೌಕರರು ಇದ್ದರೂ ಕೂಡಾ ಒಂದು ಇಲ್ಲವೇ ಒಂದೂವರೆ ತಿಂಗಳಲ್ಲಿ ವರ್ಗಾವಣೆಯನ್ನು ಮುಗಿಸುತ್ತದೆ.ಆದರೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮಾತ್ರ ವಿಚಿತ್ರ ವಿಭಿನ್ನ.ವರ್ಷದಿಂದ ವರ್ಷಕ್ಕೆ ಸರಳ ಸುಲಭವಾಗಬೇಕಾಗಿರುವ ಈ ಒಂದು ವರ್ಗಾವಣೆ ಪ್ರಕ್ರಿಯೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಸರಳ ವಾಗಿ ನಡಯಬೇಕಾಗಿರುವ ಈ ಒಂದು ಪ್ರಕ್ರಿಯೆ ಕಬ್ಬಿಣದ ಕಡಲೆಯಾಗುತ್ತಿದೆ.

ಹುಟ್ಟಿದ್ದು ಒಂದು ಊರಾದರೆ ಕಲಿತಿದ್ದು ಮತ್ತೊಂ ದು ಊರಾದರೆ ನೌಕರಿ ಮಾಡೋದು ಇನ್ನೊಂದು ಊರು, ತಂದೆ ತಾಯಿ ಬಂಧು ಬಳಗದವರು ಒಂದೂರಲ್ಲಿ ಹೆಂಡತಿ ಮತ್ತೊಂದುರಲ್ಲಿ,ನೌಕರಿ ಮಾಡೋದು ಇನ್ನೊಂದುರಲ್ಲಿ ಮಕ್ಕಳು ಮತ್ತೊಂದ ರಲ್ಲಿ ಹೀಗೆ ಸಧ್ಯ ರಾಜ್ಯದಲ್ಲಿ ಶಿಕ್ಷಕರು ನಾಲ್ಕು ದಿಕ್ಕುಗ ಳಲ್ಲಿ ನಾಲ್ಕು ಜೀವನವನ್ನು ನಡೆಸುತ್ತಿದ್ದಾರೆ.ಇದೇಲ್ಲ ಒಂದು ಪರಸ್ಥಿತಿಯಾದರೆ ಇನ್ನೂ ಮುಖ್ಯವಾಗಿ ಅಂತೂ ಇಂತೂ ಬಹಳ ದಿನಗಳಿಂದ ನಾಡಿನ ಶಿಕ್ಷಕರು ತುಂಬಾ ನಿರೀಕ್ಷೆಯನ್ನಿಟ್ಟುಕೊಂಡಿದ್ದ ವರ್ಗಾವಣೆ ಪ್ರಕ್ರಿಯೆ ಆರಂಭ ಆರಂಭಗೊಂಡಿದ್ದು ಖುಷಿಯ ವಿಚಾರವಾದರೆ ಅಂದುಕೊಂಡಂತೆ ಈ ಒಂದು ವರ್ಗಾವಣೆ ನಡೆಯುತ್ತಿಲ್ಲ ಕೆಲವೊಂದಿಷ್ಟು ಬದಲಾವಣೆಗಳಾಗಬೇಕು ಎನ್ನುವ ಕೂಗಿಗೆ ಬೆಲೆ ಸಿಗುತ್ತಿಲ್ಲ ಹೀಗಿರುವಾಗ ಯಾವ ಪುರುಷಾರ್ಥಕ್ಕಾಗಿ ಯಾರಿಗಾಗಿ ಎಂಬ ಮಾತುಗಳು ನಾಡಿನ ಶಿಕ್ಷಕರಿಂದ ಕೇಳಿ ಬರುತ್ತಿದ್ದು ಇನ್ನೂ ಈ ಒಂದು ವರ್ಗಾವಣೆ ಯನ್ನು ಮುಗಿಸಲು ಒಂದು ವರ್ಷ ಬೇಕಾ ಒಂದು ತಿಂಗಳಲ್ಲಿ ನಡೆಯುವ ಮುಗಿಯುವ ಪ್ರಕ್ರಿಯೆಯ ನ್ನು ಒಂದು ವರ್ಷ ಮಾಡಿದ್ದೇಕೆ ಇಂದೆಂತಾ ವ್ಯವಸ್ಥೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಾಡಿನ ಶಿಕ್ಷಕ ರನ್ನು ಕಾಡುತ್ತಿವೆ ಆದ್ರೂ ಕೂಡಾ ಯಾವುದನ್ನು ನೊಡದೇ ಏನನ್ನು ಮಾತನಾಡದೇ ಒಂದು ವರ್ಷ ಗಳ ಯೊಜನೆಯನ್ನು ಮಾಡಿಟ್ಟಿದ್ದು ಇದರಿಂದಾಗಿ ಶಿಕ್ಷಕರು ಅಸಮಾಧಾನಗೊಂಡಿದ್ದು ಈಗಾಗಲೇ ಕೆಲವು ಶಿಕ್ಷಕರು ಬೇಡಪ್ಪ ಬೇಡ ಈ ಒಂದು ನೌಕರಿ ಯಾರಿಗೆ ಬೇಕು ಎನ್ನುತ್ತಾ ದಯಾಮರಣ ಕೊರಿ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದು ಆದ್ರೂ ಕೂಡಾ ಶಿಕ್ಷಣ ಸಚಿವರು ಯಾವುದೇ ಶಿಕ್ಷಕರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗಲು ಬಿಡೊದಿಲ್ಲ ಎನ್ನುತ್ತಲೇ ವರ್ಗಾವಣೆಯನ್ನುಆರಂಭ ಮಾಡಿದ್ದು ದುರಂತವೆ ಸರಿ.