ಬೆಂಗಳೂರು –
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷನ ಮೇಲೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಬೆಂಬಲಿಗರು ಹಲ್ಲೆಗೆ ಯತ್ನವನ್ನು ಮಾಡಿದ ಘಟನೆಯ ಆರೋಪವೊಂದು ಕೇಳಿ ಬಂದಿದ್ದು ಈ ಒಂದು ವಿಡಿಯೋ ಮತ್ತು ಸಂದೇಶವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಹೌದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಪ್ಪಳ ತಾಲೂಕ ಘಟಕದ ನಿರ್ದೇಶಕರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಅವರ ಬಣದ ಬೆಂಬಲಿಗರು ಹಲ್ಲೆ ಮಾಡಿದ ಆರೋಪ ಈಗ ಕೇಳಿ ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ್ದಾರೆ ಆದರೆ
ಬಿ.ಆರ್.ಪಿ.ಹಾಗೂ ಸಿ.ಆರ್.ಪಿ.ಅವರ ಮೇಲೆ ಸಂಘದ ಸರ್ವ ನಿರ್ದೇಶಕರು ಸಭೆಯನ್ನು ಮಾಡದೇ ಅಲ್ಲದೇ ಸಿ.ಆರ್.ಪಿ.ಹಾಗೂ ಬಿ.ಆರ್.ಪಿ.ರವರು ಶಿಕ್ಷಕರ ಸಂಘ ಮಾಡುವ ಕಾರ್ಯದ ಬಗ್ಗೆ ಪ್ರಶ್ನೆ ಮಾಡಬಾರದು ಎಂಬ ನಿಮಯ ಇಲಾಖೆಯಲ್ಲಿ ಆಗಲಿ ಅಥವಾ ಸಂಘದ ಬೈಲಾ ದಲ್ಲಿ ಆಗಲಿ ಇರುವುದಿಲ್ಲ.ಸಭೆ ಕರೆಯದೆ ದೂರು ನೀಡಿದ್ದು ಹಾಗೂ ನಿಯಮ ಇಲ್ಲದ ವಿಷಯ ಕುರಿತು ದೂರು ನೀಡಿದ ವರ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿ.ಇ.ಓ.ಅವರಿಗೆ ನಿನ್ನೆ ಸಂಘದ ನಿರ್ದೇಶಕರಾಗಿ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ನೀಡಿದ್ದರು.ಇಂದು ಸಭೆ ಇದೇ ಎಂದು ಸಂಘದ ಕಾರ್ಯದರ್ಶಿ ಅವರು ಸ್ವತ ಸಂದೇಶ ಕಳುಹಿಸಿದರ ಪರಿಣಾಮವಾಗಿ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಸಭೆಗೆ ಭಾಗವಹಿಸಲು ಹೊಗಿದ್ದ ಸಮಯದಲ್ಲಿ ಸಿ.ಆರ್.ಪಿ. ಹಾಗೂ ಬಿ.ಆರ್.ಪಿ.ಅವರು ಶಿಕ್ಷಕರ ಸಂಘದ ಬೇಕು ಬೇಡಿಕೆಗಳ ಕುರಿತು ಪ್ರಶ್ನೆ ಮಾಡಬಾರದು ಹಾಗೂ ಸಂಘದ ನಿರ್ದೇಶಕರನ್ನು ಸಭೆಗೆ ಕರೆಯದೆ ಯಾವ ರೀತಿಯಲ್ಲಿ ದೂರು ನೀಡಿದ್ದಿರಿ ಅದಕ್ಕೆ ಸಂಬಂಧಿಸಿದ ದಾಖಲೆ ಕೇಳಲು ಮುಂದಾದಾಗ ಬೀರಪ್ಪ ಅಂಡಗಿ ಚಿಲವಾಡಗಿ ಅವರನ್ನು ತಳ್ಳಾಡುವುದರ ಜೊತೆಗೆ ಅವರ ಮೇಲೆ ಹಲ್ಲೆಗೆ ಮುಂದಾಗಿ ದ್ದಾರಂತೆ
ಇನ್ನೂ ವಿಶೇಷ ಎಂದರೆ ಸಭೆ ಕರೆದಿದ್ದು ಮಾತ್ರ ಶಿಕ್ಷಕರ ಸಂಘದ ಕಾರ್ಯಕಾರಣಿ ಸಮಿತಿ ಸಭೆ ಆದರೆ ದುರಂತ ಎಂದರೆ ಅಲ್ಲಿ ಬೀರಪ್ಪ ಅಂಡಗಿ ಚಿಲವಾಡಗಿ ಅವರ ಮೇಲೆ ಹಲ್ಲೆಗೆ ಯತ್ನ ಮಾಡಿದವರು ಶಿಕ್ಷಕರ ಸಂಘದ ನಿರ್ದೇಶಕರೆ ಅಲ್ಲಾ.ಕರೆದಿದ್ದು ಶಿಕ್ಷಕರ ಸಂಘದ ಸಭೆ ಆದರೆ ಬಂದಿದ್ದವ ರು ಶಂಭುಲಿಂಗನಗೌಡ ಅವರ ಬೆಂಬಲಿಗರು.ಸಂಘದ ನಿರ್ದೇಶಕರಲ್ಲದವರು ಸೇರಿ ಸುಮಾರು ೫೦ ಜನ ಬೀರಪ್ಪ ಅಂಡಗಿ ಅವರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರಂತೆ.ಸಭೆ ಕರೆದಿದ್ದು ಕೂಡಾ ರಾಜ್ಯಾಧ್ಯಕ್ಷರು ಕೆಲಸ ಮಾಡುವ ಶಾಲೆ ಯಲ್ಲಿ ಈ ರೀತಿಯಲ್ಲಿ ಹಲ್ಲೆಗೆ ಮುಂದಾಗಿರುವುದು ನಾಚಿಕೆ ಗೆಡಿನ ಸಂಗತಿಯಾಗಿದೆ.ಈಗಲೂ ಕೂಡಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಬೀರಪ್ಪ ಅಂಡಗಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.ಸಿ.ಆರ್.ಪಿ.ಹಾಗೂ ಬಿ.ಆರ್.ಪಿ. ಅವರು ಶಿಕ್ಷಕರ ಬೇಕು – ಬೇಡಿಕೆಗಳ ಕುರಿತು ಚರ್ಚೆ ಮಾಡಬಾರದು ಎಂಬ ನಿಯಮ ಇದ್ದರೆ ಕೂಡಲಿ ರಾಜ್ಯದ ಶಿಕ್ಷಕರ ಕ್ಷೆಮೆ ಕೇಳುತ್ತಾರೆ.ಅವರ ಬಳಿಯಲ್ಲಿ ಯಾವುದೇ ದಾಖಲೆ ಇಲ್ಲದಿದ್ದರಿಂದ ದರ್ಪದ ಮೂಲಕ ತಾವು ಮಾಡಿದ ತಪ್ಪು ಮುಚ್ಚಲು ಯತ್ನ ಮಾಡಿದ್ದಾರೆ.ಕೂಡಲೇ ಬೀರಪ್ಪ ಅಂಡಗಿ ಚಿಲವಾಡಗಿ ಅವರ ಮೇಲೆ ಹಲ್ಲೆಗೆ ಯತ್ನ ಮಾಡಿ ದವರು ಕ್ಷೆಮೆ ಯಾಚನೆ ಮಾಡಬೇಕು ಇಲ್ಲದಿದ್ದರೆ. ಅಂಥವ ರು ವಿರುದ್ಧ 2016ರ ವಿಕಲಚೇತನರ ಕಾಯ್ದೆಯ ಅನ್ವಯ ದೂರು ದಾಖಲು ಮಾಡಲು ನಿರ್ಧರಿಸಿದ್ದಾರೆ
ಈ ಒಂದು ಸಂದೇಶವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ ಇದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದು ವಿಡಿಯೋ ಸಮೇತ ವೈರಲ್ ಮಾಡಲಾಗಿದೆ.