ಕಾರವಾರ –
ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮಹಿಳೆ ಸಾವಿಗೀಡಾದ ಘಟನೆ ಕಾರವಾದ ಅಂಕೋಲಾ ಬಳಿ ನಡೆದಿದೆ.

ಕಾರವಾರದ ಅಂಕೋಲಾದ ಬಳಿಯ ರಾಷ್ಟ್ರೀಯ ಹೆದ್ದಾರಿಯ 63 ರ ಮಾಸ್ತಿಕಟ್ಟಾ ಬಳಿ ಈ ಒಂದು ಅಪಘಾತ ನಡೆದಿದೆ. ಸಾರಿಗೆ ಬಸ್ ಮತ್ತು ಬಸ್ ನಡುವೆ ಈ ಒಂದು ಅಪಘಾತವಾಗಿದ್ದು

ಘಟನೆಯಲ್ಲಿ ಕಾರಿನಲ್ಲಿದ್ದ ಒರ್ವ ಮಹಿಳೆ ಸಾವಿಗೀಡಾಗಿದ್ದಾಳೆ.ಮೃತಳನ್ನು ಧಾರವಾಡದ ಕೃಷಿ ವಿವಿ ಯ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ರೇಖಾ ಎಂಬ ಮಹಿಳೆಯಾಗಿದ್ದಾಳೆ.

ಇನ್ನೂ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಕುಲಪತಿಗಳ ಆಪ್ತ ಕಾರ್ಯದರ್ಶಿ ಮುಲ್ಲಾ ಅವರು ತಮ್ಮ ಕಾರಿನಲ್ಲಿ ಬರುತ್ತಿರುವಾಗ ಈ ಒಂದು ಅಪಘಾತವಾಗಿದೆ.

ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರ ಮಾಸ್ತಿಕಟ್ಟಾ ಬಳಿ ಘಟನೆ ನಡೆದ ಈ ಒಂದು ಅಪಘಾತದಲ್ಲಿ ಕಾರಿನಲ್ಲಿದ್ದವರು ಧಾರವಾಡದ ಕೃಷಿ ವಿವಿ ನೌಕರರಾಗಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರ ಪೈಕಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಂಕೋಲಾದಿಂದ ಧಾರವಾಡಗೆ ಕಾರು ಬರುತ್ತಿತ್ತು ಇನ್ನೂ ಗದಗದಿಂದ ಕಾರವಾರಕ್ಕೆ ಬಸ್ ಹೊರಟಿತ್ತು ಕಾರಿಗೆ ಡಿಕ್ಕಿಯಾಗಿದೆ.

ಸಧ್ಯ ಕಾರಿನಲ್ಲಿರುವ ಗಾಯಾಳುಗಳು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಹೈವೇ ಪೆಟ್ರೋಲಿಂಗ್ ಪೊಲೀಸರು ಮತ್ತು ಸ್ಥಳೀಯರಿಂದ ರಕ್ಷಣೆ ಮಾಡಲಾಗಿದ್ದು ಅಂಕೋಲಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.