ಬೆಂಗಳೂರು –
ಪತಿ ಬದುಕಿರುವಾಗಲೇ ಮಹಿಳೆಯೊಬ್ಬಳು ವಿಧವಾ ವೇತನವನ್ನು ಪಡೆದುಕೊಳ್ಳುತ್ತಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಗಂಡ ಇನ್ನೂ ಬದುಕಿದ್ದು ಮೊದಲೇ ಮರಣ ಪ್ರಮಾಣ ಪತ್ರ ಮಾಡಿಸಿಕೊಂಡು ವಿಧವಾ ವೇತನ ಪಿಂಚಣಿ ಪಡೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ವತಃ ಪತಿ ಭಾಸ್ಕರ್ ಅವರು ಈ ದೂರು ಸಲ್ಲಿಕೆ ಮಾಡಿದ್ದು, ಪತಿ ಸುಜಾತಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಭಾಸ್ಕರ್ ಹಾಗೂ ಸುಜಾತಾ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೈಮನಸ್ಸು ಉಂಟಾಗಿ ಎರಡು ವರ್ಷದ ಹಿಂದೆ ಭಾಸ್ಕರ್ ಮನೆಬಿಟ್ಟು ಹೋಗಿದ್ದು ಪುನಃ ವಾಪಸ್ ಆಗಿರಲಿಲ್ಲ. ಇದೇ ಸಮಯದಲ್ಲಿ ಪತಿ ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ಸುಜಾತಾ ಅವರು ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಕಲಿ ದಾಖಲೆಗಳನ್ನು ನೀಡಿದ್ದಾರೆ.

ಅಲ್ಲದೆ ಭಾಸ್ಕರ್ ಮೃತಪಟ್ಟಿರುವುದಾಗಿ 2019ರಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ ಇದನ್ನು ಅರಿತ ಮಹಿಳೆಯ ಪತಿ ಮಾಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
