ಒಳ ಉಡುಪಿ ನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆ ಬಂಧನ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ಮಹಿಳೆ

Suddi Sante Desk

ಮಂಗಳೂರು –

ಒಳ ಉಡುಪಿ ನಲ್ಲಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧನ ಮಾಡಿರುವ ಘಟನೆ ಮಂಗಳೂರಿ ನಲ್ಲಿ ನಡೆದಿದೆ. ಹೌದು ಇಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಸರಗೋಡಿನ ಮೊಹಮ್ಮದ್ ಅಲಿ ಸಮೀರಾ ಎಂಬ ಮಹಿಳೆಯೇ ಬಂಧಿತ ಆರೋಪಿಯಾಗಿದ್ದಾರೆ. ಕಾಸರಗೋಡಿನ ಮೊಹಮ್ಮದ್ ಅಲಿ ಸಮೀರಾ ಎಂಬಾಕೆ ದುಬೈನಿಂದ ಏರ್ ಇಂಡಿಯಾ ವಿಮಾನ ದಲ್ಲಿ ಆಗಮಿಸಿದ್ದರು. ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸಾಕ್ಸ್ ಗಳನ್ನೂ ಒಳಗೊಂಡಂತೆ ತನ್ನ ಒಳ ಉಡುಪುಗಳಲ್ಲಿ ಚಿನ್ನ ಇಟ್ಟುಕೊಂಡು ಸಾಗಿಸುವ ಪ್ರಯತ್ನ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ದಾಳಿ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ರೂ. 1.10 ಕೋಟಿ ಮೌಲ್ಯದ 2.41 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ವಿದೇಶಿ ಮೂಲದ ಸಿಗರೇಟ್‌ ಗಳನ್ನು ಕೂಡ ವಶಪಡಿಸಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.