ಬಾಗಲಕೋಟೆ –
ನಿಜವಾಗಿಯೂ ಹುಟ್ಟು,ಸಾವು ನಮ್ಮ ಕೈಯಲ್ಲಿ ಇಲ್ಲ ಯಾವ ಸಮಯದಲ್ಲಿ ನಮ್ಮ ಸಾವು ಎಲ್ಲಿ ಹೇಗೆ ಎಂಬುದು ಆ ದೇವರೆ ಬಲ್ಲ. ಹೌದು ಇದಕ್ಕೆ ಉದಾಹರಣೆ ಬಾಗಲಕೋಟ ದಲ್ಲಿ ನಡೆದ ಅಪಘಾತ. ಜೀವನದ ಬಗ್ಗೆ ಕನಸು ಕಟ್ಟಿಕೊಂಡು ಎಫ್‌ಡಿಎ ಪರೀಕ್ಷೆ ಬರೆದ ಯುವಕನೊಬ್ಬನ ಸಾವು.ಹೌದು ಇಂದು FDA ಪರೀಕ್ಷೆ ಮನೆಗೆ ಹೋಗುವಾಗ ಅಪಘಾತಕ್ಕೀಡಾಗಿ ದಾರಿ ಮಧ್ಯದಲ್ಲಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದ ಅಕ್ಷಯ ಕುಮಾರ್ ಮೃತ ಯುವಕ. ಈತ ತನ್ನ ಸ್ನೇಹಿತ ನೊಂದಿಗೆ ಬಾಗಲಕೋಟೆಗೆ ಎಫ್ ಡಿಎ ಪರೀಕ್ಷೆ ಬರೆಯಲು ಬಂದಿದ್ದನು.

ಇಬ್ಬರು ಪರೀಕ್ಷೆ ಬರೆದು ಊರಿಗೆ ವಾಪಾಸಾಗಲು ಹೊರಟಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದಾಗ, ಮುಧೋಳ ತಾಲೂಕಿನ ಲೋಕಾಪುರ ಬಳಿ ಎತ್ತೊಂದು ಅಡ್ಡ ಬಂದಿದ್ದು, ಅದಕ್ಕೆ ಬೈಕ್ ಗುದ್ದಿದೆ. ಈ ಅಪಘಾತದಿಂದಾಗಿ ಅಕ್ಷಯಕುಮಾರ ಸಾವನ್ನಪ್ಪಿದ್ದಾನೆ. ಬೈಕ್ ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕನಿಗೆ ಗಂಭೀರ ಗಾಯವಾಗಿದೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.