ಸೈನ್ಯ ಸೇರಬೇಕೆಂಬ ಕನಸು ಕಾಣುತ್ತಿದ್ದ ಯುವಕ ನೇಣಿಗೆ ಶರಣು – ಹಂಚಿನಾಳ ಗ್ರಾಮದಲ್ಲಿ ನೇಣಿಗೆ ಶರಣಾದ ಯುವಕ…..

Suddi Sante Desk
ಸೈನ್ಯ ಸೇರಬೇಕೆಂಬ ಕನಸು ಕಾಣುತ್ತಿದ್ದ ಯುವಕ ನೇಣಿಗೆ ಶರಣು – ಹಂಚಿನಾಳ ಗ್ರಾಮದಲ್ಲಿ ನೇಣಿಗೆ ಶರಣಾದ ಯುವಕ…..

ಚಿಕ್ಕೋಡಿ

ಸೈನ್ಯ ಸೇರ್ಪಡೆ ಕನಸು ಕಾಣುತ್ತಿದ್ದ ಯುವಕ ನೊರ್ವ ನೇಣಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದೆ

ಅಪ್ಪಾಸೋ ಶಿವಾಜಿ ಪಣದೆ(24) ಆತ್ಮಹತ್ಯೆ ಮಾಡಿಕೊಂಡ ಯುವಕ ನಾಗಿದ್ದಾನೆ.ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ನಿಪ್ಪಾಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.