ಕಲಬುರಗಿ –
ಪೊಲೀಸ್ ಠಾಣೆಯ ಮುಂಭಾಗದಲ್ಲೆ ಪ್ರೇಯಸಿ ಯಿಂದ ಪ್ರಿಯಕರಿನಿಗೆ ಸಖತ್ ಗೂಸಾ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ. ಹೌದು ಪ್ರಿಯಕರಿನಿ ಗಾಗಿ ಬೆಂಗಳೂರಿನಿಂದ ಹುಡುಕಿಕೊಂಡ ಬಂದು ಗೂಸಾ ಕೊಟ್ಟಿದ್ದಾಳೆ ಯುವತಿ.
ಹೌದು ಕಳೆದ ಐದು ವರ್ಷಗಳಿಂದ ಪ್ರಿತಿಸಿ ಮದುವೆ ಯಾಗೋಕೆ ಮುಂದಾಗಿದ್ದರು ಈ ಒಂದು ಜೋಡಿ. ಬೆಂಗಳೂರಿನ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ರಿಜಿಸ್ಟಾರ್ ಮಾಡಿದ್ದರು ಯುವಕ ಯುವತಿ
ಆದ್ರೆ ಯುವತಿಗೆ ಬೇರೆ ಯುವಕರ ಜೊತೆ ಅಕ್ರಮ ಸಂಬಂಧ ಇದೆ ಅಂತಾ ಬೆಂಗಳೂರು ಬಿಟ್ಟು ಬಂದಿದ್ದ ಯುವಕ.ಕಲಬುರಗಿ ತಾಲ್ಲೂಕಿನ ಪಟ್ನಾ ಗ್ರಾಮದ ನಿವಾಸಿ ಇರ್ಫಾನ್ ನೇ ಒದೆ ತಿಂದ ಯುವಕ ನಾಗಿದ್ದಾನೆ
ಬೆಂಗಳೂರಿನ ರಹೀನಾ ರಾನು ಕಲಬುರಗಿಯ ಇರ್ಫಾನ್ ಒಬ್ಬರಿಗೊಬ್ಬರು ಪ್ರೀತಿಸಿದ್ದರು.ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಯುವಕ ಯುವತಿ.
ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದು ಬೆಂಗಳೂರಿನಿಂದ ಬಂದ ಯುವತಿ.ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಯುವಕ ಯುವತಿ ಗಲಾಟೆ ಕಂಡು ಬಂದಿತು. ಇರ್ಫಾನ್ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಗೂಸಾ ಕೊಟ್ಟಿದ್ದಾಳೆ ಈ ಒಂದು ಯುವತಿ.