ಕೊಪ್ಪಳ
ಬಾಲಕನೊಬ್ಬರ ಮೇಲೆ ನರಭಕ್ಷಕ ಚಿರತೆಯೊಂದು ದಾಳಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.ಕೊಪ್ಪಳದ ಗಂಗಾವತಿಯ ಸಂಗಾಪೂರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಅನಿಲ್ ಕುಮಾರ(10) ಎಂಬ ಬಾಲಕನ ಮೇಲೆ ಚಿರತೆ ದಾಳಿಯಾಗಿದೆ. ಗ್ರಾಮದ ಹೊರವಲಯದಲ್ಲಿ ಅನಿಲಕುಮಾರ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ಚಿರತೆ ಬರುತ್ತಿದ್ದಂತೆ ಪ್ರಾಣಾಪಾಯದಿಂದ ಪಾರಾಗಲು ಬಾಲಕ ಕುರಿ ಹಟ್ಟಿಗೆ ಹೋಗಿದ್ದಾನೆ.
ಅಲ್ಲಿಗೆ ಹೋದ ಚಿರತೆ ಬಾಲಕನ ಮೇಲೆ ಮತ್ತೇ ದಾಳಿ ಮಾಡಿದೆ. ಬಾಲಕನ ಮೇಲೆ ಸಂಪೂರ್ಣವಾಗಿ ದಾಳಿ ಮಾಡಿ ಇನ್ನೇನು ದೊಡ್ಡ ಅನಾಹುತ ನಡೆದೆ ಹೋಗುತ್ತದೆ ಎನ್ನುವಷ್ಟರಲ್ಲಿ ಬಾಲಕ ಚಿರಾಡುವ ಧ್ವನಿ ಕೇಳಿದ ಸಾರ್ವಜನಿಕರು ಎದ್ದೋ ಬಿದ್ದೋ ಎನ್ನುತ್ತಾ ಕುರಿ ದಡ್ಡಿಗೆ ಬಂದಿದ್ದಾರೆ. ಸಾರ್ವಜನಿಕರು ಬರುವ ಧ್ವನಿ ಕೇಳಿದ ಚಿರತೆ ಬಾಲಕನನ್ನು ಬಿಟ್ಟು ಹೋಗಿದೆ. ಘಟನೆಯಲ್ಲಿ ಬಾಲಕನ ಕೆನ್ನಿಗೆ ಕುತ್ತಿಗೆ ಸೇರಿದಂತೆ ದೆಹದ ಹಲವು ಕಡೆಗಳಲ್ಲಿ ಗಾಯಗಳಾಗಿದ್ದು ಸಧ್ಯ ಸಾರ್ವಜನಿಕರು ಹೋಗದಿದ್ದರೆ ಖಂಡಿತವಾಗಿಯೂ ಬಾಲಕ ಬದುಕುತ್ತಿರಲಿಲ್ಲ. ಸಧ್ಯ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.
ಇತ್ತೀಷೆಗಷ್ಟೇ ದುರ್ಗಾದೇವಿ ಬೆಟ್ಟದಲ್ಲಿ ಯುವಕನನ್ನು ತಿಂದು ಹಾಕಿದ್ದ ಚಿರತೆ ಯುವಕ ಬಲಿಯಾಗಿ ತಿಂಗಳು ಕಳೆದರೂ ಚಿರತೆಯನ್ನು ಅರಣ್ಯ ಇಲಾಖೆ ಇನ್ನೂ ಸೆರೆ ಹಿಡಿದಿಲ್ಲ ಈಗ ಮತ್ತೊಂದು ಅವಘಡ ನಡೆದಿದ್ದು ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ದ ಅಸಮಾಧಾನಗೊಂಡಿದ್ದಾರೆ.