ಕಾರವಾರ –
ಗಣರಾಜ್ಯೋತ್ಸವದ ದಿನ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ರೊಬ್ಬರು ಹೃದಯಾಘಾ ತದಿಂದ ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ.
ಅಬ್ದುಲ್ ಖಾದರ್ ಮಹ್ಮದ್ ಶೇಖ್ ಅವರೇ ಮೃತಪಟ್ಟ ASI ಆಗಿದ್ದಾರೆ.1964 ರಂದು ಕಾರವಾರದಲ್ಲಿ ಜನಿಸಿದ ಅವರು 1992 ರಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು.ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಾಂಡೇಲಿ ಗ್ರಾಮೀಣ,ದಾಂಡೇಲಿ ನಗರ, ಜೊಯಿಡಾ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಇನ್ನೂ 2019 ರಲ್ಲಿ ಎಎಸ್‌ಐ ಆಗಿ ಪದೊನ್ನತಿ ಹೊಂದಿ ಕಾರವಾರ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂ ಡಿದ್ದರು.ನಿನ್ನೆ ಗಣರಾಜ್ಯೋತ್ಸವ ಆಚರಣೆ ವೇಳೆ ಬೆಳಗ್ಗೆ 8.30 ಕ್ಕೆ ಕರ್ತವ್ಯದಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ದ್ದರು.ತಕ್ಷಣ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.