ಬಳ್ಳಾರಿ –
ಶೌಚಗೃಹ ನಿರ್ಮಾಣ ಮಾಡಿದ ಬಿಲ್ ಕ್ಲೀಯರ್ ಮಾಡಿ ಪ್ರಮಾಣ ಪತ್ರ ನೀಡಲು ಹಣದ ಬೇಡಿಕೆ ಇಟ್ಟಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಬಳ್ಳಾರಿ ಯಲ್ಲಿ ನಡೆದಿದೆ.ಹೌದು ಶೌಚಾಲಯ ಹಣಕ್ಕೂ ಕೈ ಚಾಚಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಯೊಬ್ಬರು ಭ್ರಷ್ಟಾಚಾರ ವಿರೋಧಿ ದಳದ ಬಲೆಗೆ ಬಿದ್ದಿದ್ದಾರೆ.

ಹೌದು ಬಳ್ಳಾರಿಯ ರೇಡಿಯೋ ಪಾರ್ಕ್ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅಬೀದಾ ಬೇಗಂ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದವರಾಗಿದ್ದಾರೆ.ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಶೌಚ ಗೃಹ ನಿರ್ಮಾಣವನ್ನು ಮಾಡಲಾಗಿತ್ತು ಕಾಮಗಾರಿ ಪೂರ್ಣಗೊಂಡಿರುವ ಕುರಿತು ದೃಢೀಕರಣ ಪತ್ರ ನೀಡಲು ಬಳ್ಳಾರಿಯ ಜಯನಗರ ಬಡಾವಣೆ ನಿವಾಸಿ ಗುತ್ತಿಗೆದಾರ ಮೊಹಮ್ಮದ್ ಜುಲ್ಫೀಕರ್ ಎಂಬುವವರ ಬಳಿ ಅಬೀದಾ ಬೇಗಂ 10 ಸಾವಿರ ರೂ. ಲಂಚ ಕೇಳಿದ್ದರು.

ಈ ಕುರಿತು ಮೊಹಮ್ಮದ್ ಜುಲ್ಫೀಕರ್ ಎಸಿಬಿಗೆ ದೂರು ನೀಡಿದ್ದರು ಬಳಿಕ ಅಬೀದಾಗೆ ಹಣ ನೀಡುವ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು ಎಸಿಬಿ ಎಸ್ಪಿ ಶ್ರೀಹರಿ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸೂರ್ಯ ನಾರಾಯಣ ರಾವ್ ಹಾಗೂ ತಂಡ ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.