ಪೋಷಕರೇ ಶಾಲೆಗೆ ಮಕ್ಕಳನ್ನ ಕಳುಹಿಸುವ ಮುನ್ನ ಎಚ್ಚರ – ಬಾಲಕನ ಅಪಹರಣ ಕಿರಾತಕರಿಂದ ತಪ್ಪಿಸಿಕೊಂಡು ಬಂದ ಅಭಿಷೇಕ…..

Suddi Sante Desk
ಪೋಷಕರೇ ಶಾಲೆಗೆ ಮಕ್ಕಳನ್ನ ಕಳುಹಿಸುವ ಮುನ್ನ ಎಚ್ಚರ – ಬಾಲಕನ ಅಪಹರಣ ಕಿರಾತಕರಿಂದ ತಪ್ಪಿಸಿಕೊಂಡು ಬಂದ ಅಭಿಷೇಕ…..

ಮೈಸೂರು –

ಪೋಷಕರೇ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿ ಸುವ ಮುನ್ನ ಎಚ್ಚರ ಎಚ್ಚರ ಹೌದು ಹಾಡಹಗಲೇ ಶಾಲಾ ಬಾಲಕನನ್ನು ಅಪಹರಣ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ ಸಿನಿಮೀಯ ರೀತಿಯಲ್ಲಿ ಬಾಲಕನನ್ನು ಅಪಹರಣ ಮಾಡಿದ್ದಾರೆ ಮುಸುಕುಧಾರಿಗಳು

ನರಸೀಪುರ ಪಟ್ಟಣದ ತ್ರಿವೇಣಿ ನಗರದ ಬಳಿ ಈ ಒಂದು ಘಟನೆ ನಡೆದಿದೆ.ಅಭಿಷೇಕ್ 13 ವರ್ಷ ಅಪಹರಣವಾಗಿದ್ದ ಬಾಲಕನಾಗಿದ್ದು ತಪ್ಪಿಸಿಕೊಂಡು ಮರಳಿ ಮನೆಗೆ ಬಂದಿದ್ದಾನೆ ನರಸೀಪುರ ಪಟ್ಟಣದ ಜಿಎಸ್ಎಫ್ ಕಾಲೋನಿ ನಿವಾಸಿ ನಂಜಯ್ಯ,ನಂದಿನಿ ದಂಪತಿಗಳ ಪುತ್ರ ನಾಗಿದ್ದಾನೆ.

ಪಟ್ಟಣದ ಲಿಟಲ್ ಫ್ಲವರ್ ಕಾನ್ವೆಂಟ್ ನಲ್ಲಿ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿ.ಸಮಯ ಪ್ರಜ್ಞೆ ಯಿಂದ ಅಪಹರಣಕಾರರರಿಂದ ತಪ್ಪಿಸಿಕೊಂಡು ಬಂದಿದ್ದಾನೆ ಅಭಿಷೇಕ್.ನಿನ್ನೆ ಬೆಳಗ್ಗೆ ಶಾಲೆಗೆ ಹೋಗುವಾಗ ಬಾಲಕ ಅಭಿಷೇಕ್ ನನ್ನು ಅಪಹರಣ ಮಾಡಿದ್ದರು ಮುಸುಕುದಾರಿಗಳು.

ತ್ರಿವೇಣೆನಗರದ ದಿನಸಿ ಅಂಗಡಿ ಬಳಿ ಮಾರುತಿ ವ್ಯಾನ್ ನಲ್ಲಿ ಬಂದಿದ್ದ ಮುಸುಕುದಾರಿಗಳು.
ಬಾಲಕನಿಗೆ ವಿದ್ಯೋದಯ ಕಾಲೇಜು ವಿಳಾಸ ಕೇಳಿದ್ದಾರೆ.ಬಾಲಕ ಅಭಿಷೇಕ್ ವಿಳಾಸ ತಿಳಿಸುವ ವೇಳೆ‌ ಹುಡುಗನ ಬಾಯಿ ಮುಚ್ಚಿ ವ್ಯಾನಿಗೆ ಹಾಕಿ ಕೊಂಡಿರುವ ಮುಸುಕುದಾರಿಗಳು.ಬಳಿಕ ತ್ರಿವೇಣಿ ನಗರದಿಂದ ತಾಯೂರು ಗ್ರಾಮಕ್ಕೆ ಹೋಗುವ ರಸ್ತೆ ಕಡೆ ಬಂದಾಗ ಹುಡುಗ ಸಮಯ ಪ್ರಜ್ಞೆ ಮೆರೆದಿದ್ದಾನೆ.

 

ನಾನು ಯೂರಿನ್ ಪಾಸ್ ಮಾಡ್ಬೇಕು ನಿಲ್ಲಿಸಿ ನಿಲ್ಲಿಸಿ ಎಂದು ಕೂಗಿದ್ದಾನೆ.ಈ ವೇಳೆ ವ್ಯಾನ್ ನಿಲ್ಲಿಸಿ ಡೋರ್ ಓಪನ್ ಮಾಡಿದ ತಕ್ಷಣವೇ ಹುಡುಗ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ಹುಡುಗ ಓಡಿ ಬರುವುದನ್ನು ಅಲ್ಲೇ ಇದ್ದ ರೈತರು ಗಮನಿ ಸಿದ್ದಾರೆ.

ತಕ್ಷಣ ಪೊಲೀಸ್ ಠಾಣೆಗೆ ಬಂದು ಘಟನೆ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮೈಸೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.