ಕುಷ್ಟಗಿ –
ರಾಜ್ಯ ಸರ್ಕಾರದ ನೌಕರರಿಗೆ ಜಾರಿಗೊಳಿಸಿರುವ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ರಾಜಸ್ಥಾನ ಮಾದರಿಯಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವ ರಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘಗಳ ತಾಲ್ಲೂಕು ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.ಶಾಸಕ ಅಮರೇ ಗೌಡ ಬಯ್ಯಾಪುರ ಅವರನ್ನು ಭೇಟಿ ಮಾಡಿದ ಸಂಘಗಳ ಪ್ರತಿನಿಧಿಗಳು ಎನ್‌ಪಿಎಸ್ ಯೋಜನೆಯಿಂದ ನೌಕರರಿಗೆ ಆಗುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಬೇಕು ಈ ಕುರಿತು ಒತ್ತಡ ತರುವಂತೆ ಕೋರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶರಣಪ್ಪ ವಡ್ಡರ ಮಾತನಾಡಿ ಹೊಸ ಪಿಂಚಣಿ ಯೋಜನೆ ಯಿಂದ 2006ರ ಏಪ್ರಿಲ್ 1ರ ನಂತರದ ನೌಕರರಿಗೆ ನಿವೃತ್ತಿ ನಂತರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಇದರಿಂ ದ ಲಕ್ಷಾಂತರ ನೌಕರರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಈ ಕಾರಣಕ್ಕೆ ರಾಜಸ್ಥಾನ ಸರ್ಕಾರ ತನ್ನ ವಾರ್ಷಿಕ ಬಜೆಟ್ ನಲ್ಲಿ ಎನ್‌ಪಿಎಸ್ ರದ್ದುಪಡಿಸಿ ಹಳೆ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಿದೆ.ಹಾಗಾಗಿ ಕರ್ನಾಟಕದ ಲ್ಲಿಯೂ ಅದೇ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಬಜೆಟ್ ದಲ್ಲಿ ಈ ವಿಷಯವನ್ನು ಪ್ರಕಟಿಸುವಂತೆ ಒತ್ತಾಯಿಸಲು ಶಾಸಕರು ಮುತುವರ್ಜಿವಹಿಸಬೇಕೆಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಹ್ಮದ್ ಹುಸೇನ್ ಆದೋನಿ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ,ಉಪಾಧ್ಯಕ್ಷ ವಿರೂಪಾಕ್ಷಪ್ಪ ಅಂಗಡಿ, ಪ್ರಮುಖರಾದ ಭರಮಪ್ಪ ಪರಸಾಪೂರ,ಲಕ್ಷ್ಮಣ ಪೂಜಾರ,ಬಾಲಾಜಿ ಬಳಿಗಾರ,ಕಳಕಮಲ್ಲೇಶ ಭೋಗಿ ಸೇರಿದಂತೆ ಶಿಕ್ಷಕರ ಸಂಘದ ಪ್ರತಿನಿಧಿಗಳು,ನೌಕರರ ಸಂಘದ ಪ್ರಮುಖರು ಇದ್ದರು.