SSLC ವಿದ್ಯಾರ್ಥಿಗಳಿಗೆ ಪಾಠ ಮಾಡಿದ AC ಅಶೋಕ ತೇಲಿ – ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಛಲವಿರಬೇಕು ನಿಮ್ಮ ಗುರಿ ಮಟ್ಟಲು ಸಾಧ್ಯ ಎಂದ್ರು ಉಪವಿಭಾಗಾಧಿಕಾರಿ…..

Suddi Sante Desk
SSLC ವಿದ್ಯಾರ್ಥಿಗಳಿಗೆ ಪಾಠ ಮಾಡಿದ AC ಅಶೋಕ ತೇಲಿ – ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಛಲವಿರಬೇಕು ನಿಮ್ಮ ಗುರಿ ಮಟ್ಟಲು ಸಾಧ್ಯ ಎಂದ್ರು ಉಪವಿಭಾಗಾಧಿಕಾರಿ…..

ಧಾರವಾಡ

ಛಲವಿದ್ದರೆ ಮಾತ್ರ ಗುರಿ ಮಟ್ಟಲು ಸಾಧ್ಯ ಉಪವಿಭಾಗಾಧಿಕಾರಿ ಅಶೋಕ ತೇಲಿ ಹೌದು ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಛಲವಿರಬೇಕು ಅಂದಾಗ ಮಾತ್ರ ನಿಮ್ಮ ಗುರಿ ಮಟ್ಟಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಉಪವಿಭಾಗಾಧಿಕಾರಿ ಅಶೋಕ ತೇಲಿ ಹೇಳಿದರು

ಸ್ಥಳೀಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಬೇಟಿ ನೀಡಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಪರಿಶೀಲಿಸುವ ವೇಳೆ ಅವರು ಮಾತ ನಾಡಿದರು.ಅಭ್ಯಾಸದ ಸಮಯದಲ್ಲಿ ನಿಮ್ಮ ಮನಸ್ಸು ಬೇರೆ ಕಡೆ ಗಮನಿಸದಂತೆ ಮನಸ್ಸನ್ನು ಕೇಂದ್ರಿಕೃತಗೊಳಿಸಬೇಕು.

ಅದಕ್ಕೆ ಬೆಳಿಗ್ಗೆ ಎದ್ದು ಅಭ್ಯಾಸವನ್ನು ಮಾಡುವ ರೂಢಿಯನ್ನು ಬೆಳಸಿಕೊಳ್ಳಬೇಕು ಯೋಗ ಮುಂತಾದ ಅಭ್ಯಾಸಗಳನ್ನು ಮಾಡಿದರೆ ನಿಮ್ಮ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಸಾಧ್ಯವಾಗು ತ್ತದೆ ನೀವು ಓದಿನ ವೇಳಾಪಟ್ಟಿಯನ್ನು ಇಟ್ಟು ಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡ ಬೇಕು.

ವಿದ್ಯಾರ್ಥಿ ಜೀವನದಲ್ಲಿ ಕಷ್ಟಗಳು ಬರುತ್ತವೆ ಅದನ್ನು ಎದುರಿಸಿದರೆ ಯಶಸ್ಸು ತಾನೇ ಬರುವದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾ ತನ್ನು ಹೇಳಿದರು.ನಂತರ ಅವರು ಶಾಲೆಯ ಮೂಲಸೌಕರ್ಯ ಪರಿಶೀಲಿಸಿ, ಮುಖ್ಯಾಧ್ಯಾಪಕ ರಿಂದ ಶಾಲೆಯ ಸಮಗ್ರ ಮಾಹಿತಿಯನ್ನು ಪಡೆದು ಕೊಂಡು

ವಿದ್ಯಾರ್ಥಿಗಳ ಪಾಠದ ಜೊತೆಗೆ ಶಾಲೆಯ ಮೂಲಭೂತ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸಿ ಕುಂದು ಕೊರತೆಗಳಿದ್ದರೆ ಸಂಬಂಧಿಸಿದ ಇಲಾಖೆಗೆ ಹಾಗೂ ಅವಶ್ಯಕತೆವಿದ್ದರೆ ನಮ್ಮ ಗಮನಕ್ಕೂ ತರಬೇಕು ಎಂದರು.ಶಾಲೆಯಲ್ಲಿ ಉತ್ತಮ ವಾತಾವರಣವಿದೆ ಎಂದು ಹರ್ಷ ವ್ಯಕ್ತಪಡಿಸಿ ದರು.

ಮುಖ್ಯಾಧ್ಯಾಪಕ ಸುರೇಶ ಸನದಿ, ಎಸ್‍ಡಿಎ ಮ್‍ಸಿ ಅಧ್ಯಕ್ಷ ರಾಚಯ್ಯ ಹಿರೇಮಠ, ಉಪಾಧ್ಯಕ್ಷೆ ಲಲಿತಾ ಜಾಧವ ಸೇರಿದಂತೆ ಶಿಕ್ಷಕರು ಎಸ್‍ಡಿಎ ಮ್‍ಸಿ ಸದಸ್ಯರು, ಸಿಬ್ಬಂದಿಗಳು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.