ಬೆಂಗಳೂರು –
ಹೌದು ರಾಜ್ಯದಲ್ಲಿ ಎಸಿಬಿ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.ಸೂರ್ಯ ಉದ ಯಿಸುವ ಮುನ್ನವೇ ಇನ್ನೂ ಚಿರನಿದ್ರೇಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ACB ಅಧಿಕಾರಿಗಳು ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿಯನ್ನು ಸಂಪಾದನೆ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದೆ. ಏಕಕಾಲಕಕ್ಕೆ ಬೆಂಗಳೂರಿನ 9 ಕಡೆಗಳಲ್ಲಿ 100 ಅಧಿಕಾರಿಗ ಳಿಂದ ದಾಳಿ ನಡೆದಿದೆ.ಎಸ್ಪಿ ಉಮಾ ಪ್ರಶಾಂತ್ ನೇತೃತ್ವ ದಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇನ್ನಿತರ ಜಾಗಗಳ ಮೇಲೆ ದಾಳಿ ನಡೆದಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಿಡುವಿಲ್ಲದೆ ಕಡತಗಳ ಪರಿಶೀಲನೆ ಯನ್ನು ಮಾಡತಾ ಇದ್ದಾರೆ.ಇನ್ನೂ ಅಧಿಕಾರಿಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗ ಳೊಂದಿಗೆ ಸಂಪರ್ಕದಲ್ಲಿದ್ದ ಮದ್ಯವರ್ತಿಗಳ ನಿವಾಸದ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಯಾವ ಯಾವ ಅಧಿಕಾರಿ ಮೇಲೆ, ಎಲ್ಲೆಲ್ಲಿ ದಾಳಿ ಗೊತ್ತಾ
1) ರಾಘು ಬಿ.ಎನ್, ಚಾಮರಾಜಪೇಟೆ
2) ಮೋಹನ್, ಮನೋರಾಯನಪಾಳ್ಯ, ಆರ್ ಟಿ ನಗರ
3) ಮನೋಜ್, ದೊಮ್ಮಲೂರು
4) ಮುನಿರತ್ನ, ಮಲ್ಲತಹಳ್ಳಿ
5) ತೇಜು ಅಲಿಯಾಸ್ ತೇಜಸ್ವಿ, ಆರ್ ಆರ್ ನಗರ
6) ಅಶ್ವಥ್, ಮುದ್ದಿನಪಾಳ್ಯ, ಮಲ್ಲತಹಳ್ಳಿ
7) ರಾಮ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್
8) ಲಕ್ಷ್ಮಣ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್
9) ಚಿಕ್ಕಹನುಮಯ್ಯ, ಮುದ್ದಿನಪಾಳ್ಯ
ಸಧ್ಯ 100 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇತ್ರತ್ವದಲ್ಲಿ ದಾಳಿಯಾಗಿದ್ದು ಬಿಡುವಿಲ್ಲದೆ ಪರಿಶೀಲನೆಯನ್ನು ಮಾಡತಾ ಇದ್ದಾರೆ.