ಹಾವೇರಿ –
ಹಾವೇರು ಯ ಡಿಡಿಪಿಐ ಕಚೇರಿ ಮೇಲೆ ಎಸಿಬಿ ಅಧಿಕಾರಿ ಗಳು ದಾಳಿ ಮಾಡಿದ್ದಾರೆ.ಹೌದು ವ್ಯಾಪಕವಾಗಿ ಭ್ರಷ್ಟಾಚಾ ರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಲ್ಲಿಯ ಡಿಡಿ ಪಿಐ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀ ಸರು ದಾಳಿ ನಡೆಸಿದ್ದಾರೆ.ಒಟ್ಟು ₹1.69 ಲಕ್ಷ ನಗದು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಎಸ್ಪಿ ಜಯಪ್ರಕಾಶ,ಡಿವೈಎಸ್ಪಿ ಬಿ.ಆರ್.ಗೋಪಿ ನೇತೃತ್ವದಲ್ಲಿ ಸೋಮವಾರ ಸಂಜೆ ದೇವಗಿರಿ ಸಮೀಪದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಉಪನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸ ಲಾಗಿದೆ.ಈ ವೇಳೆ ಡಿಡಿಪಿಐ ಜಗದೀಶ್ವರ ಅವರ ಬಳಿ ಕವರ್‌ನಲ್ಲಿ ₹ 50 ಸಾವಿರ ನಗದು ಪತ್ತೆಯಾಗಿದೆ. ಕಚೇರಿ ಯ ಹಲವು ನೌಕರರ ಬಳಿಯೂ ನಗದು ಪತ್ತೆಯಾಗಿದೆ.

₹1.69 ಲಕ್ಷ ಕ್ಯಾಶ್ ಡಿಕ್ಲೆರೇಷನ್ ರಿಜಿಸ್ಟರ್’ನಲ್ಲಿ ನಮೂ ದಾಗಿರಲಿಲ್ಲ.ಈ ಬಗ್ಗೆ ಸಿಬ್ಬಂದಿಗೆ ನೋಟಿಸ್ ಕೊಟ್ಟು ವಿವರಣೆ ಕೇಳಲಾಗಿದೆ.ಡಿಡಿಪಿಐ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪದ ಮೇರೆಗೆ ದಾಳಿ ನಡೆಸ ಲಾಗಿದೆ.ದಾಖಲೆಗಳ ಪರಿಶೀಲನೆ ಮುಂದುವರಿಸಲಾಗಿದೆ ಎಂದು ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್.ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ಪೆಕ್ಟರ್ ಗಳಾದ ಪ್ರಭಾವತಿ ಶೇತಸನದಿ,ಬಸವರಾಜ ಗುದ್ಲಿ ಮತ್ತು ಇತರ ಸಿಬ್ಬಂದಿ ದಾಳಿ ತಂಡದಲ್ಲಿದ್ದರು.