ದಾವಣಗೆರೆ –
ಬೆಂಗಳೂರಿನ BBMP ಬೊಮ್ಮನಹಳ್ಳಿ ವಿಭಾಗದ AEE ಸಿ. ಎ. ಅಂಜನಪ್ಪ ಮನೆಯ ಮೇಲೆ ಎಸಿಬಿ ದಾಳಿಯಾಗಿದೆ.ಅಕ್ರಮವಾಗಿ ಆದಾಯಕ್ಕಿಂತಲೂ ಆಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಈ ಒಂದು ದಾಳಿಯಾಗಿದೆ.ಅತ್ತ ಬೆಂಗಳೂರಿನಲ್ಲಿ ನಾಲ್ಕೈದು ಕಡೆಗಳಲ್ಲಿ ದಾಳಿಯಾಗುತ್ತಿದ್ದಂತೆ ಇತ್ತ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಮನೆ ಹಾಗೂ ಬೆಂಗಳೂರಿನ ಜಗಜೀವನರಾಂ ನಗರದ ಮನೆ ಸೇರಿ ನಾಲ್ಕು ಕಡೆ ದಾಳಿಯಾಗಿದೆ.

ಮೇಲ್ನೋಟಕ್ಕೆ ಹತ್ತಕ್ಕೂ ಹೆಚ್ಚು ಕಡೆ ಆಸ್ತಿ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತ್ರತ್ವದಲ್ಲಿ ಈ ಒಂದು ದಾಳಿಯಾಗಿದೆ.9.79 ಲಕ್ಷ ರೂಪಾಯಿ ನಗದು. 22 ಎಕರೆ ಅಡಿಕೆತೋಟ, ನಾಲ್ಕು ಕಂಪನಿಗೆ ಸೇರಿದ ಕಾರ್ ಬೆಂಗಳೂರು ಮತ್ತು ಲೋಕಿಕೆರೆಯಲ್ಲಿ ಗ್ರಾಮದಲ್ಲಿ ಐಷಾರಾಮಿ ಮನೆಗಳು ದಾಳಿ ವೇಳೆ ಪತ್ತೆಯಾಗಿದ್ದು ತನಿಖೆ ಮುಂದುವರಿದಿದೆ.