ACB ಬಲೆಗೆ ಜಲ ಮಂಡಳಿಯ ಮುಖ್ಯ ಇಂಜಿನಿಯರ್ – ಒಳ ಚರಂಡಿ ಕಾರ್ಯಕ್ಕೆ ಅನುಮತಿ ನೀಡಲು 1.5 ಲಕ್ಷ ರೂ ಬೇಡಿಕೆ…..

Suddi Sante Desk

ಕಲಬುರ್ಗಿ –

ಒಳಚರಂಡಿ ಕೆಲಸಕ್ಕೆ ಅನುಮತಿ ನೀಡಲು ಒಂದೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಲ ಮಂಡಳಿಯ ಇಂಜಿನಿಯರ್ ರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಕಲಬುರಗಿ ಯ ನಗರದ ಟೌನ್‌ಶಿಪ್‌ ಒಂದರಲ್ಲಿ ಕುಡಿಯುವ ನೀರು ಒಳಚರಂಡಿ ಕಾರ್ಯಕ್ಕೆ ಸಂಬಂಧಿಸಿದ ಅನುಮತಿ ನೀಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 1.5 ಲಕ್ಷ ರೂಪಾಯಿ ಪಡೆಯುತ್ತಿದ್ದ ಕರ್ನಾಟಕ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗೀಯ ಕಚೇರಿಯ ಮುಖ್ಯ ಎಂಜಿನಿ ಯರ್ ನಾಗರಾಜ ಅವರೇ ಬಲೆಗೆ ಬಿದ್ದ ಅಧಿಕಾರಿ ಯಾಗಿದ್ದಾರೆ

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಂಡಳಿಯ ಮುಖ್ಯ ಎಂಜಿನಿಯರ್ ಯಶಸ್ವಿ ಟೌನ್‌ಶಿಪ್‌ ವ್ಯವಸ್ಥಾಪಕ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಅವರು ಟೌನ್‌ಶಿಪ್‌ನ ಲ್ಲಿನ ಮಂಡಳಿಯ ಕಾಮಗಾರಿಗಳಿಗೆ ಅನುಮೋದನೆ ನೀಡಲು ಅರ್ಜಿ ಸಲ್ಲಿಸಿದ್ದರು. ಹಲವು ದಿನಗಳಿಂದ ಅರ್ಜಿಯನ್ನು ವಿಲೇವಾರಿ ಮಾಡದ ನಾಗರಾಜ ಅವರು 2 ಲಕ್ಷ ಲಂಚ ನೀಡಿದರೆ ಅನುಮೋದನೆ ನೀಡುವುದಾಗಿ ತಿಳಿಸಿದ್ದರು.ಇದರಿಂದ ಬೇಸತ್ತ ಅಣ್ಣಾಸಾಹೇಬ ಅವರು ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ ಅವರಿಗೆ ದೂರನ್ನು ನೀಡಿದ್ದರು.

ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ ಮತ್ತು ಅಧಿಕಾರಿಗಳ ತಂಡವು ಕಚೇರಿಯಲ್ಲಿ ನಾಗರಾಜ ಅವರು ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿತು. ಬಳಿಕ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.