ಬೆಂಗಳೂರು –
ಭೈಯಪ್ಪನಹಳ್ಳಿ ಪೊಲೀಸ್ ಸ್ಟೇಷನ್ ಪಿಎಸ್ ಐ ಹಾಗೂ ಹೆಡ್ ಕಾನ್ಸ್ ಟೇಬಲ್ ಲಂಚ ಸ್ವೀಕಾರ ಮಾಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿಎಸ್ ಐ ಸೌಮ್ಯ ಹಾಗೂ ಜೆ.ಪಿ.ರೆಡ್ಡಿಯನ್ನು ACB ಅಧಿಕಾರಿಗಳು ಬಂಧಿಸಿದ್ದಾರೆ.
ಘಟನೆಯಲ್ಲಿ ಕುಮಾರ್ ಎಂಬ ಪೇದೆಯ ತಪ್ಪಿಸಿಕೊಂಡು ಹೋಗುವ ಸಮಯದಲ್ಲಿ ಕಾಲು ಮುರಿದಿದ್ದು ಅವನನ್ನು ಆಸ್ಪತ್ರೆಗೆ ಕೂಡಲೇ ದಾಖಲಿಸಲಾಗಿದೆ.
ಎಸಿಬಿ ಎಸಿಪಿ ಪ್ರತಾಪ್ ರೆಡ್ಡಿ ಮತ್ತು ತಂಡದಿಂದ ಈ ಒಂದು ಕಾರ್ಯಾಚರಣೆ ನಡೆದಿದೆ.ಮೊಬೈಲ್ ಕಳ್ಳತನ ಕೇಸ್ ನಲ್ಲಿ ಆರೋಪಿಯನ್ನು ಕೇಸ್ ನಿಂದ ಕೈ ಬಿಡಲು 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರಂತೆ. ಭೈಯಪ್ಪನಹಳ್ಳಿ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್ಸ್ ಟೇಬಲ್ ರೆಡ್ಡಿಯಿಂದ ಡಿಮ್ಯಾಂಡ್ ಮಾಡಿದ್ರು.ಕಳ್ಳತನ ಆಗಿದ್ದ ಮೊಬೈಲ್ ಫೋನ್ ಗಳನ್ನು ರಿಸೀವ್ ಮಾಡಿಕೊಂಡಿದ್ದ ಆರೋಪಿ. ಕೊನೆಗೆ ಒಂದು ಲಕ್ಷಕ್ಕೆ ಡೀಲ್ ಮಾತನಾಡಿದ್ದ ಪೊಲೀಸರು.
ಇಂದು ಹಣ ಪಡೆದ ಬಳಿಕ ಠಾಣೆಯ ಒಳಗೆ ನುಗ್ಗಿದ ಎಸಿಬಿ ಅಧಿಕಾರಿಗಳು.ಈ ವೇಳೆ ಹಣ ಪಡೆದ ರೆಡ್ಡಿ ಬಳಿಕ ಪೇದೆ ಕುಮಾರ್ ಎಂಬಾತನ ಕೈಗೆ ನೀಡಿದ್ದರು.ಎಸಿಬಿ ದಾಳಿ ಅಂತ ಗೊತ್ತಾದ ಬಳಿಕ ಪೇದೆ ಕುಮಾರ್ ಹಣದ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದ.ಠಾಣೆಯ ಕಟ್ಟಡದ ಮೊದಲ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.ಈ ವೇಳೆ ಕುಮಾರ್ ಎಂಬ ಪೇದೆಯ ಕಾಲು ಮುರಿತವಾಗಿದೆ.ಸದ್ಯ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿಯವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.