ACB ಬಲೆಗೆ ಭೂಮಾಪನ‌ ಅಧಿಕಾರಿ – ಜಮೀನು ಅಳತೆಗೆ ಹಣದ ಬೇಡಿಕೆ ಇಟ್ಟಿದ್ದ ಅಧಿಕಾರಿ

Suddi Sante Desk

ಯಾದಗಿರಿ –

ಜಮೀನನ್ನು ಅಳತೆ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಭೂಮಾಪನ ಇಲಾಖೆಯ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ರಘುರಾಮ ಎಂಬ ಅಧಿಕಾರಿ ಜಮೀನು ಅಳತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೀವ ಚವ್ಹಾಣ ಅವರಿಂದ ₹2 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಯಾದಗಿರಿಯ ನಗರದ ಹೊಸಳ್ಳಿ ಕ್ರಾಸ್‌ ಹೋಟೆಲೊಂದರಲ್ಲಿ ₹2 ಸಾವಿರ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಜಮೀನು ಅಳತೆ ಮಾಡುವ ವಿಚಾರದಲ್ಲಿ ₹5 ಸಾವಿರ ಬೇಡಿಕೆ ಇಟ್ಟಿದ್ದರು. ಮೊದಲಿಗೆ ₹2 ಸಾವಿರ ಪಡೆಯಲು ಒಪ್ಪಿದ್ದರು. ಆದರಂತೆ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ’

ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. ಇನ್ಬೂ ದಾಳಿ ವೇಳೆ ಎಸಿಬಿ ಜಿಲ್ಲಾ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಉಮಾಶಂಕರ, ಇನ್‌ಸ್ಪೆಕ್ಟರ್‌ ಗುರುಪಾದ ಬಿರಾದಾರ, ಸಿಬ್ಬಂದಿ ಗುತ್ತಪ್ಪಗೌಡ, ವಿಜಯಕುಮಾರ, ಅಮರನಾಥ, ಪ್ರಕಾಶ ಮಾಳಿ, ರವಿ ಹಾಗೂ ಸಾಬಣ್ಣ ಸೇರಿದಂತೆ ಹಲವರು ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.