ವಿಜಯಪುರ –
ವರ್ಗಾವಣೆಗೊಂಡ ಶಿಕ್ಷಕರನ್ನುಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.ಹೌದು ವಿಜಯ ಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಈ ಒಂದು ಘಟನೆ ನಡೆದಿದ್ದು ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ ವಿನೋದ ರಾಠೋಡ ಅವರೇ ಎಸಿಬಿ ಬಲೆಗೆ ಬಿದ್ದವರಾಗಿದ್ದು ಇತ್ತೀಚಿಗಷ್ಟೇ ವರ್ಗಾವಣೆಗೊಂಡಿದ್ದ ಶಿಕ್ಷಕರನ್ನು ಬಿಡಗಡೆ ಮಾಡಲು ವಿನಾಕಾರಣ ವಿಳಂಬ ಮಾಡಲಾಗುತ್ತಿತ್ತು ಕೊನೆಗೆ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.

ಈ ಒಂದು ವಿಚಾರ ಕುರಿತಂತೆ ಶಿಕ್ಷಕರು ಎಸಿಬಿ ಅಧಿಕಾರಿ ಗಳಿಗೆ ದೂರನ್ನು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಎಸಿಬಿ ಅಧಿಕಾರಿಗಳು ಇಂದು ಕಚೇರಿಯಲ್ಲಿ 5000 ರೂಪಾಯಿ ಹಣವನ್ನು ತಗೆದುಕೊ ಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ವಶಕ್ಕೆ ತಗೆದು ಕೊಂಡಿರುವ ಎಸಿಬಿ ಅಧಿಕಾರಿಗಳು ವಿಚಾರಣೆಯನ್ನು ಮಾಡುತ್ತಿದ್ದು ಇನ್ನೂ ಬಿಇಒ ಅವರ ಹೆಸರು ಕೂಡಾ ಈ ಒಂದು ಹಣದಲ್ಲಿ ಕೇಳಿ ಬಂದಿದ್ದು ಈ ಒಂದು ವಿಚಾರ ಕುರಿತಂತೆ ಎಸಿಬಿ ಅಧಿಕಾರಿಗಳು ಭ್ರಷ್ಟ ದ್ವಿತೀಯದರ್ಜೆಯ ಸಹಾಯಕ ನೌಕರರನ್ನು ವಶಕ್ಕೆ ತಗೆದುಕೊಂಡು ಸುಧೀರ್ಘ ವಾಗಿ ವಿಚಾರಣೆಯನ್ನು ಮಾಡುತ್ತಿದ್ದಾರೆ.
