ACB ಬಲೆಗೆ KSRTC ಸಂಚಾರಿ ಕಂಟ್ರೋಲರ್ – ಒಂದು ಲಕ್ಷ ರೂಪಾಯಿ ಲಂಚ ತಗೆದು ಕೊಳ್ಳುವಾಗ ಬಲೆಗೆ ಬಿದ್ದ ವೆಂಕಟಾಚಲಪತಿ…..

Suddi Sante Desk

ಚಿಕ್ಕಬಳ್ಳಾಪುರ –

ಎಸಿಬಿ ಬಲೆಗೆ KSRTC ಸಂಚಾರಿ ಕಂಟ್ರೋಲರ್ ಒಬ್ಬರು ಬಿದ್ದಿದ್ದಾರೆ. ಹೌದು ನಿನ್ನೆ ತಡರಾತ್ರಿ ಚಿಂತಾ ಮಣಿಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಎಸ್ ಆರ್ ಟಿಸಿ ಟ್ರಾಫಿಕ್ ಕಂಟ್ರೋಲರ್ ವೆಂಕಟಾಚಲಪತಿಯನ್ನು ಬಲೆಗೆ ಕೆಡವಿದ್ದಾರೆ. ವೆಂಕಟಾಚಲಪತಿ ಸಂಬಂಧಿ ಹಾಗೂ ಮೇಲಾಧಿಕಾರಿ ಯಾಗಿದ್ದ ಡಿಸಿ ಚಂದ್ರಶೇಖರ್ ವರಿಗೆ ಲಂಚದ ಮೊತ್ತ ತಲುಪಿಸುತ್ತಿದ್ದರು.

ಕೋಲಾರ ಕೆಎಸ್‌ಆರ್ಟಿಸಿ ಡಿಸಿ ಚಂದ್ರಶೇಖರ್ ತಮ್ಮ ಸಂಬಂಧಿಯಾದ ಜಿಎನ್. ವೆಂಕಟಾಚಲಪತಿ ಮೂಲಕ ಕಂಡಕ್ಟರ್ ಬಳಿ 2 ಲಕ್ಷ ರೂ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ನಿವೃತ್ತಿ ಘೋಷಣೆ ಮಾಡಲು ಇಷ್ಟು ದೊಡ್ಡ ಮೊತ್ತ ಕೇಳಿದ್ದು ಮುಂಗಡ ವಾಗಿ 1 ಲಕ್ಷ ರೂ. ಸ್ವೀಕರಿಸಿದ್ದ ಚಂದ್ರಶೇಖರ್ 50 ರೂ. ನೀಡುವಂತೆ ಪಟ್ಟು ಹಿಡಿದಿದ್ದರು.40 ಸಾವಿರ ರೂ. ಲಂಚ ಪಡೆಯುವ ವೇಳೆ ವೆಂಕಟಾಚಲಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಕೋಲಾರ ಎಸಿಬಿ ಡಿವೈಎಸ್ಪಿ ವಿರೇಂದ್ರಕುಮಾರ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆಸಲಾಗಿದ್ದು ಸಧ್ಯ ಕಂಟ್ರೋಲರ್ ಅವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.