ಹಾವೇರಿ –
ಅತಿವೃಷ್ಠಿಯಿಂದ ಬಿದ್ದ ಮನೆಗೆ ಬಿಲ್ ಮಂಜೂರು ಮಾಡಿ ಕೊಡಲು 80 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ PDO ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಯಲ್ಲಿ ನಡೆದಿದೆ. ಹೌದು ಜಿಲ್ಲೆಯ ಹಾನಗಲ್ಲ ತಾಲೂಕಿನ ಸಮ್ಮ ಸಗಿ ಗ್ರಾ.ಪಂ ಪಿಡಿಒ ಹಾಗೂ ಮಧ್ಯವರ್ತಿಯನ್ನು ಎಸಿಬಿ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ ಪಿಡಿಒ ಕೃಷ್ಣಪ್ಪ ಆಲದಕಟ್ಟಿ,ಏಜೆಂಟ್ ಕುಬೇರಪ್ಪ ಗಾಡಿ ಹುಚ್ಚನವರ ಎಂಬುವರು 20 ಸಾವಿರ ರೂ ಸ್ವೀಕರಿಸುತ್ತಿ ದ್ದಾಗ ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಹಾನಗಲ್ಲ ತಾಲೂಕಿನ ಶೃಂಗೇರಿ ಗ್ರಾಮದ ಪರಸಪ್ಪ ಫಕ್ಕೀರಪ್ಪ ಗೊರನವರ ಎಂಬುವರ ಮನೆ ಅತಿವೃಷ್ಠಿಯಿಂ ದಾಗಿ ಬಿದ್ದಿತ್ತು.ಅದರ ಬಿಲ್ ಮಂಜೂರಾತಿಗೆ ಪಿಡಿಒ ಏಜೆಂಟರ ಮೂಲಕ 80 ಸಾವಿರ ರೂ.ಬೇಡಿಕೆ ಇಟ್ಟಿದ್ದರು

ಮೊದಲ ಕಂತಿನಲ್ಲಿ 30 ಸಾವಿರ ರೂ.ಲಂಚ ಸ್ವೀಕರಿಸಿದ್ದಾರೆ. ಈಗ ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಹೀಗಾಗಿ ಫಲಾನು ಭವಿ ಪರಸಪ್ಪ ಎಸಿಬಿಗೆ ದೂರು ನೀಡಿದ್ದರು ಮತ್ತೆ 20 ಸಾವಿರ ರೂ ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.