ಕಲಬುರ್ಗಿ –
ಹೌದು ಎಸಿಬಿ ಬಲೆಗೆ ಇಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಗುತ್ತಿಗೆದಾರರಿಂದ ಲಂಚವನ್ನು ಪಡೆಯುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳಿಂದ ಟ್ರ್ಯಾಪ್ ಆಗಿದ್ದು ಇಬ್ಬರು ಅಧಿಕಾರಿಗಳು ಟ್ರ್ಯಾಪ್ ಆಗಿದ್ದಾರೆ
ತಾಲೂಕ ದೈಹಿಕ ಶಿಕ್ಷಣ ಅಧಿಕಾರಿ ಹಾಗು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸಿಬಿ ಬಲೆಗೆ ಬಿದ್ದ ಇಬ್ಬರು ಅಧಿಕಾರಿ ಗಳಾಗಿದ್ದಾರೆ.ಗುತ್ತಿಗೆದಾರ ದೇವಯ್ಯ ಎಂಬುವವರಿಂದ 10000 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.5000 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ ಭ್ರಷ್ಟಾಚಾರ ಅಧಿಕಾರಿಗಳು.
ಶ್ರೀಕಾಂತ್ ಚಿತ್ತಾಪೂರ ದೈಹಿಕ ಶಿಕ್ಷಣಾಧಿಕಾರಿ ಹಾಗೂ ರವೀಂದ್ರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದು 50000 ಸಾವಿರ ರೂಪಾಯಿ ಕ್ರೀಡಾ ಸಾಮಗ್ರಿಗಳ ಖರೀದಿಗೆ ಮಂಜೂರಾಗಿದ್ದ ಹಣದಲ್ಲಿ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.ಸಂತೋಷ ಬನ್ನಟ್ಟಿ ಡಿಎಸ್ ಪಿ ಅವರ ನೇತೃತ್ವದಲ್ಲಿ ಟ್ರ್ಯಾಪ್ ಮಾಡಲಾಗಿದೆ. ಸಧ್ಯ ವಶಕ್ಕೆ ತೆಗೆದುಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆಯನ್ನು ಮಾಡತಾ ಇದ್ದಾರೆ.