ವಿಜಯಪುರ –

ಬಿಐಇಆರ್ ಟಿ 13 ವಿಶೇಷ ಶಿಕ್ಷಕರ ಹುದ್ದೆಗಳಿದ್ದ ಯೋಜನೆಯಡಿಯಲ್ಲಿ ವಿಶೇಷ ಶಿಕ್ಷಕರ ನೇಮಕಾತಿ ಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.

ಕಚೇರಿಯ FDA ವಿಜಯಕುಮಾರ ಪವಾರ ಶಿಕ್ಷಕರ ನೇಮಕಾತಿಗಾಗಿ 25 ಸಾವಿರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಶಿಕ್ಷಕರಾದ ಸತೀಶ್ ಎಂಬುವರು ಎಸಿಬಿ ಅಧಿಕಾರಿಗಳಿಗೆ ದೂರ ನ್ನು ನೀಡಿದ್ದರು. ದೂರು ಬರುತ್ತಿದ್ದಂತೆ ಕಾರ್ಯಪ್ರವೃ ತ್ತರಾಗಿ ಖಚಿತವಾದ ಮಾಹಿತಿಯನ್ನು ಪಡೆದು ಕೊಂಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಡಿವೈಎಸ್ಪಿ ಮಂಜುನಾಥ ಹೊಂಗಲ,ಇನ್ಸ್ಪೇಕ್ಟರ್ ಅಧಿಕಾರಗಳಾದ ಪರಮೇಶ ಕವಟಗಿ ಮತ್ತು ಚಂದ್ರಕಲಾ ಸೇರಿದಂತೆ ಸಿಬ್ಬಂದಿಗಳ ನೇತ್ರತ್ವದಲ್ಲಿ ಈ ಒಂದು ದಾಳಿಯನ್ನು ಮಾಡಲಾಗಿದೆ. ಕಚೇರಿ ಯಲ್ಲಿ ಹಾಡು ಹಗಲೇ ಶಿಕ್ಷಕನಿಂದ ಹಣವನ್ನು ಸ್ವೀಕಾರ ಮಾಡುತ್ತಿರುವಾಗಲೇ ರೇಂಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳು ಬಲೆ ಹಾಕಿದ್ದಾರೆ.ಈ ಮೂಲಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕನನ್ನು ಟ್ರ್ಯಾಪ್ ಮಾಡಿದ್ದಾರೆ. ಹಣದ ಸಮೇತ ಎಸಿಬಿ ಅಧಿಕಾರಿಗಳು ವಶಕ್ಕೆ ತಗೆದು ಕೊಂಡಿದ್ದಾರೆ.ಇನ್ನೂ ಈ ಒಂದು ಕಾರ್ಯಾಚರಣೆ ಯಲ್ಲಿ ಎಸಿಬಿ ಇಲಾಖೆಯ ಸಿಬ್ಬಂದಿಗಳಾದ ಶೇಖ್ ಮತ್ತು ಮುಂಜಿ ಅವರು ಪಾಲ್ಗೊಂಡಿದ್ದರು.ಸಧ್ಯ ಹಣದ ಸಮೇತವಾಗಿ ಡಿಡಿಪಿಐ ಕಚೇರಿಯ ಸಿಬ್ಬಂದಿ ಯನ್ನು ವಶಕ್ಕೆ ತಗೆದುಕೊಂಡಿರುವ ಎಸಿಬಿ ಅಧಿಕಾರಿ ಗಳು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.