ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮತ್ತೆ ಅವಘಡಗಳು – ಮೂವರಿಗೆ ತೀವ್ರ ಗಾಯ ಸ್ಪರ್ಧೆಯಲ್ಲಿ ಮತ್ತೆ ನಡೆದವು ಅವಘಡಗಳು

Suddi Sante Desk

ಹಾವೇರಿ

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.ನಿಷೇಧದ ನಡುವೆ ಜಿಲ್ಲೆಯ ಅಕ್ಕಿಆಲೂರು ಮತ್ತು ಹಾನಗಲ್ಲ್ ನಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಎರಡು ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಓಡುತ್ತಿದ್ದ ಹೋರಿಯನ್ನು ಹಿಡಿಯುವಾಗ ಮೂರು ನಾಲ್ಕು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿಗಳು ಆಸ್ಪತ್ರೆಗೆ ಶಿಪ್ಟ್ ಮಾಡಿದರು.

108 ಸಿಬ್ಬಂದಿಗಳು

ಒಬ್ಬರ ಕಾಲು ಮುರಿದಿದ್ದು ಇನ್ನೊಬ್ಬರ ತಲೆಗೆ ಪೆಟ್ಟು ಆಗಿದ್ದು ಇನ್ನೊಬ್ಬರಿಗೆ ತೀವ್ರವಾಗಿ ಗಾಯಗೊಂಡಿ ದ್ದಾರೆ.

108 ಸಿಬ್ಬಂದಿಗಳು

ಇನ್ನೂ ಘಟನೆಯಲ್ಲಿ ಒರ್ವ ಯುವಕನ ಕಣ್ಣಿನ ಗುಡ್ಡೆ ಕಿತ್ತುಕೊಂಡು ಮೂಗಿನ ಬಳಿ ಎತ್ತಿನಕೊಂಬು ಹಾಯ್ದು ಬಂದಿದ್ದು ಹೀಗಾಗಿ ಘಟನೆಯಲ್ಲಿ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಶ್ವ,ಗೋಪಾಲ,ಮತ್ತು ಹರೀಶ್ ಮೂವರು ಗಾಯಗೊಂಡಿದ್ದು ಪೊನ್ ಕರೆ ಬರುತ್ತಿದ್ದಂತೆ ಇತ್ತ 108 ಸಿಬ್ಬಂದಿ ಗಳಾದ ಪೈಲಟ್ ಗಳಾದ ಸತೀಶ್, ಶ್ರೀಕೃಷ್ಣ EMT ಗಳಾದ ಕೃಷ್ಣಾಜೀ,ಶಿವಪ್ಪ ಇವರು ಹಾವೇರಿ ಜಿಲ್ಲೆಯ 108 ವ್ಯವಸ್ಥಾಪಕರಾದ ಪ್ರಭಾಕರ್ ತಳವಾರ ಮಾರ್ಗದರ್ಶನದಲ್ಲಿ ಗಾಯಾಳುಗಳ‌ನ್ನು ಆಸ್ಪತ್ರೆಗೆ ದಾಖಲು ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.