This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಉಪನ್ಯಾಸಕನಾಗಬೇಕೆಂದು ಹೊರಟವರು ಇಂದು ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿ – ವಿನೋದ ಮುಕ್ತೇದಾರ ಕಹಾನಿ

WhatsApp Group Join Now
Telegram Group Join Now

ಹುಬ್ಬಳ್ಳಿ –

ಮನಸ್ಸು ಮಾಡಿದ್ರೆ ಏನೇಲ್ಲಾ ಸಾಧಿಸಬಹುದು ಎನ್ನೊದಕ್ಕೇ ಈ ಸ್ಟೋರಿನೇ ಸಾಕ್ಷಿ ಹೌದು ಇದೊಂದು ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಕಿತ್ತು ತಿನ್ನುವ ಬಡತನದ ನಡುವೆ ಏನಾದರರೊಂದು ಸಾಧನೆ ಮಾಡಬೇಕೆಂದು ಹೊರಟವರ ಕಥೆ ಇದು. ಒಂದು ಕಡೆ ಕಷ್ಟ ಪಟ್ಟು ಸ್ನಾತಕೋತ್ತರ ಪದವಿ , ಪದವಿಯ ನಂತರ ಸಂಶೋಧನೆ ಹೀಗೆ ಮುಗಿಸಿ ಉಪನ್ಯಾಸಕರಾಗಬೇಕು ಎಂದುಕೊಂಡ ಇಂದು ಪೊಲೀಸ್ ಅಧಿಕಾರಿಯಾಗಿರುವ ಮಹಾನ್ ಸಾಧಕರ ಕಹಾನಿ. ಗ್ರಾಮೀಣ ಪ್ರದೇಶ ಯಾವುದೇ ಸೂಕ್ತ ತರಭೇತಿ ಇಲ್ಲ ಮಾರ್ಗದರ್ಶವಿಲ್ಲ ಇವೆಲ್ಲದರ ನಡುವೆ ಎಲ್ಲರ ಹಾಗೇ ಸರ್ಕಾರಿ ಶಾಲೆ ಯಲ್ಲಿ ಕಲಿತು. ಇಂದು ಹುಬ್ಬಳ್ಳಿಯ ಉತ್ತರ ವಿಭಾಗದ ಎಸಿಪಿಯಾಗಿರುವ ವಿನೋದ ಮುಕ್ತೇದಾರ ಸ್ಟೋರಿ.

ವಿನೋದ ಮುಕ್ತೇದಾರ 3-5-1974 ರಲ್ಲಿ ಗುಲ್ಬಾರ್ಗ ಜಿಲ್ಲೆಯ ಚಿತ್ತಾಪೂರ ಗ್ರಾಮದಲ್ಲಿ ತಂದೆ ಮಾಣಿಕಪ್ಪ ತಾಯಿ ಮೀನಾಕ್ಷಿ ಮಗನಾಗಿ ಹುಟ್ಟಿದರು. ಇಬ್ಬರು ಸಹೋದರರು ಅಣ್ಣ ಸಧ್ಯ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ತಮ್ಮ ಶಿಕ್ಷಕರಾಗಿದ್ದಾರೆ. ಒರ್ವ ಸಹೋದರಿ.ಹುಟ್ಟಿದ ಊರಿನಲ್ಲಿಯೇ ಪ್ರಾಥಮಿಕ ಶಾಲೆ ಕಿತ್ತು ತಿನ್ನುವ ಬಡತನ ಹತ್ತು ಹಲವಾರು ಸಮಸ್ಯೆ ಸಂಕಷ್ಟಗಳು ಇವೆಲ್ಲದರ ನಡುವೆ ತಂದೆಯ ಅನಾರೋಗ್ಯ ಒಂದು ಕಡೆ ಇನ್ನೂ ಚಿಕ್ಕವರು ಮತ್ತೊಂದು ಕಡೆ ಅಣ್ಣನು ಚಿಕ್ಕವ ತಮ್ಮನು ಚಿಕ್ಕವನು ತಂಗಿ ಕೂಡಾ ಸಣ್ಣವರು. ಹೀಗಿರುವಾಗ ಕುಟುಂಬವನ್ನು ನಡೆಸಬೇಕಾದ ತಂದೆಗೆ ಅನಾರೋಗ್ಯದಿಂದ ಸಮಸ್ಯೆಯಾಯಿತು.

ಮನೆ ನಡೆಸಲು ಕಷ್ಟದ ಪರಸ್ಥಿತಿಯಾಯಿತು ಸಣ್ಣವರಾದರು ಅಣ್ಣನೊಂದಿಗೆ ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡ ವಿನೋದ ಮುಕ್ತೇದಾರ ಅಣ್ಣನೊಂದಿಗೆ ತಾವು ಸೇರಿಕೊಂಡು ಗ್ರಾಮದಲ್ಲಿ ಮಕ್ಕಳಿಗೆ ಟ್ಯೂಶನ್ ಹೇಳಲು ಆರಂಭ ಮಾಡಿದ್ರು. ಟ್ಯೂಶನ್ ನಿಂದ ಬರುತ್ತಿದ್ದ 5 10 ರೂಪಾಯಿಗಳಿಂದ ಕುಟುಂಬವನ್ನು ಅಣ್ಣ ತಮ್ಮ ಸೇರಿಕೊಂಡು ನಡೆಸುತ್ತಿದ್ದರು. ಸಾಕಷ್ಟು ನೋವು ಅನುಭವಿಸಿ ಒಂದು ಕಡೆ ಕುಟುಂಬದ ಜವಾಬ್ದಾರಿ ಮತ್ತೊಂದು ಕಡೆಗೆ ಓದುವ ಛಲ ಇನ್ನೊಂದು ಕಡೆ ಟ್ಯೂಶನ್ ಛಲ ಬಿಡದೇ ಸಹೋದರಿಬ್ಬರು ಸೇರಿಕೊಂಡು ಟ್ಯೂಶನ್ ಹೇಳುತ್ತಾ ಕುಟುಂಬವನ್ನು ನಡೆಸಿಕೊಂಡು ಹೊರಟರು.

ಸಹೋದರ ಆನಂದ್

ನಂತರ ಟ್ಯೂಶನ್ ನೊಂದಿಗೆ ಗ್ರಾಮದಲ್ಲಿದ್ದ ಕಲ್ಲಿನ ಕ್ವಾರಿಯಲ್ಲಿ ಪಾಲೀಶ್ ಮಾಡಲು ವಿನೋದ್ ಮುಕ್ತೇದಾರ ಹೊರಟರು. ಹತ್ತು ರೂಪಾಯಿ ಆದಾಯ ಹೆಚ್ಚಾಯಿತು ನಂತರ ದೇವರು ದೊಡ್ಡವರು ತಂದೆಯ ಆರೋಗ್ಯ ಸರಿಯಾಯಿತು ಕುಟುಂಬದ ಜವಾಬ್ದಾರಿಯನ್ನು ಅವರಿಗೆ ವಹಿಸಿ ಕಲಿಕೆಯತ್ತ ಗಮನಹರಿಸಿದ ವಿನೋದ ಮುಕ್ತೇದಾರ್ ಹತ್ತನೇಯ ತರಗತಿಗೆ ಕಲಿಯಬೇಕೆಂದರೆ ಪುಸ್ತಕವಿಲ್ಲ. ತಗೆದುಕೊಳ್ಳುವಷ್ಟು ಹಣವಿಲ್ಲದೇ ಕಿತ್ತು ತಿನ್ನುವ ಬಡತನ.ಏನಾದರೂ ಮಾಡಿ ಹತ್ತನೇ ತರಗತಿ ಓದಬೇಕು ಪಾಸ್ ಆಗಬೇಕು ಎಂದುಕೊಂಡು ಗ್ರಾಮದಲ್ಲಿನ ಹೊಟೇಲ್ ಗೆ ಪೇಪರ್ ಓದಲು ಹೋದ್ರು. ಹೊಟೇಲ್ ನೊಂದಿಗೆ ರದ್ದಿ ಯನ್ನು ತಗೆದುಕೊಳ್ಳುತ್ತಿದ್ದ ಹೊಟೇಲ್ ಮಾಲೀಕನ ಬಳಿ ನಿಮ್ಮಲ್ಲಿ ಏನಾದರೂ ರದ್ದಿ ರೂಪಾದಲ್ಲಿ ಬಂದ ಹತ್ತನೇ ತರಗತಿ ಪುಸ್ತಕಗಳಿದ್ದರೇ ದಯಮಾಡಿ ಕೊಡಿ ಪರೀಕ್ಷೆ ಮುಗಿದ ಮೇಲೆ ನಾನು ನಿಮಗೆ ಮರಳಿ ಕೊಡುತ್ತೇನೆ ಎಂದು ತಗೆದುಕೊಂಡು ಬರುತ್ತಾರೆ. ಚನ್ನಾಗಿ ಓದಿ ಪರೀಕ್ಷೆಯಲ್ಲಿ ದ್ವೀತಿಯ ದರ್ಜೆಯಲ್ಲಿ ಪಾಸ್ ಆಗುತ್ತಾರೆ.ಹತ್ತನೇಯ ತರಗತಿಯ ಚಿತ್ರಣ ಒಂದು ಆದ್ರೆ ಇನ್ನೂ ಪಿಯುಸಿ ಓದಿದ್ದು ದುರಂತದ ಮಾತು. ಓದಲು ಪುಸ್ತಕಗಳಿಲ್ಲದೇ ರದ್ದಿಯಲ್ಲಿ ತಗೆದುಕೊಂಡು ಪರೀಕ್ಷೆ ಪಾಸ್ ಮಾಡಿ ಇನ್ನೂ ಪಿಯುಸಿ ಯಲ್ಲೂ ಇದೇ ಚಿತ್ರಣ. ಪುಸ್ತಕಗಳನ್ನು ತಗೆದುಕೊಳ್ಳಲು ಹಣವಿಲ್ಲದೇ ಬೇರೆಯವರ ಪುಸ್ತಕದಲ್ಲಿ ಪಿಯುಸಿ ಓದಿದ್ರು. ಓದಿ ಪರೀಕ್ಷೆಯನ್ನು ಬರೆದು ಕಾಲೇಜಿಗೆ ಪ್ರಥಮ ಸ್ಥಾನ ಬಂದ್ರು. ನಂತರ ಪದವಿ ಸ್ನಾತಕೋತ್ತರ ಪದವಿ ಹೀಗೆ ಮಾಡಿದ್ರು. ಗಾಣಾಗಾಪೂರ ಮೂರಾರ್ಜಿ ಶಾಲೆಯಲ್ಲಿ ಪಾರ್ಟ್ ಟೈಮ್ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡು ಅದರ ನಡುವೆಯೇ ಪಿಎಚ್ಡಿ ಪದವಿ ಮಾಡಿದ್ರು.

ಇತಿಹಾಸ ವಿಷಯದಲ್ಲಿ ಸಂಶೋಧನೆ ಮಾಡಿ ನಾನೊಬ್ಬ ಒಳ್ಳೇಯ ಉಪನ್ಯಾಸರಾಗಬೇಕೆಂದು ಕನಸು ಕಂಡಿದ್ದರು ವಿನೋದ ಮುಕ್ತೇದಾರ್. ಬಾಲ್ಯದಿಂದಲೂ ತುಂಬಾ ಕಷ್ಟಪಟ್ಟು ಕಲಿತು ಮನೆಯನ್ನು ನಡೆಸಿ ಎಲ್ಲಾ ಅನುಭವ ನೋವುಗಳನ್ನು ಅನುಭವಿಸಿರುವ ವಿನೋದ್ ಮುಕ್ತೇದಾರ ಕೆಲವೊಮ್ಮೆ ಹೊಟ್ಟೆಗೆ ಊಟವಿಲ್ಲದೇ ಹೊಟ್ಟೆ ಮೇಲೆ ತಣ್ಣಿರಿನ ಬಟ್ಟೆಯನ್ನು ಕಟ್ಟಿಕೊಂಡು ಮಲಗಿರುವ ಸಾಕಷ್ಟು ಉದಾಹರಣೆಗಳಿವೆ. ಹೀಗಿರುವಾಗ ಇವರ ಕಷ್ಟ ನೋವು ಸಾಧನೆಗೆ ನಿಜಕ್ಕೂ ಕೂಡಾ ದೇವರು ಒಳ್ಳೇಯದನ್ನು ಮಾಡಿದ್ದಾರೆ.MA PhD ಮಾಡಿ ಇತಿಹಾಸ ವಿಷಯದಲ್ಲಿ ಸಂಶೋಧನೆಯನ್ನು ಮಾಡಿ ಉಪನ್ಯಾಸಕರಾಬೇಕೆಂದುಕೊಂಡಿದ್ದರು ವಿನೋದ ಮುಕ್ತೇದಾರ.ಆಗಷ್ಟೇ ಸ್ನಾತಕೊತ್ತರ ಪದವಿ ಮುಗಿಸಿಕೊಂಡು ಇನ್ನೇನು ಉಪನ್ಯಾಸಕ ಹುದ್ದೇಗೆ ಅರ್ಜಿ ಹಾಕಬೇಕು ಎನ್ನುವಷ್ಟರಲ್ಲಿಯೇ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ನೇಮಕಾತಿಗೆ ಅರ್ಜಿ ಕರೆದರು. ಸಾಮಾನ್ಯವಾಗಿ ಪಿಎಸ್ಐ ಆಗೋದು ಅಂದ್ರೆ ಸಾಮಾನ್ಯದ ಮಾತಲ್ಲ ದೈಹಿಕವಾಗಿ ಶಕ್ತಿ ಶಾಲಿಯಾಗಿರಬೇಕು ಎಲ್ಲಾ ಫೀಟ್ ಇದ್ದುಕೊಂಡು ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಇದಾಗುತ್ತದೆನಾ ನನ್ನಿಂದ ಎಂದುಕೊಂಡು ಅರ್ಜಿ ಹಾಕಿದರು ಸಂದರ್ಶನ ಬಂತು. ಇವೆಲ್ಲದರ ನಡುವೆ ಬಾಲ್ಯದ ಗೆಳೆಯ ದೂರದ ಆಂಧ್ರಪ್ರದೇಶದ ರಾಘವೇಂದ್ರ ಗೌಡ ವಿನೋದ್ ಮುಕ್ತೇದಾರ್ ಗೆ ಬಾ ಬೆಂಗಳೂರಿಗೆ ಹೊಗೋಣಾ ಎಂದು ಕರೆದುಕೊಂಡು ಹೋದರು

ನನ್ನ ಕೈಯಲ್ಲಿ ಒಂದು ರೂಪಾಯಿ ಇಲ್ಲ ಬೆಂಗಳೂರಿಗೆ ಬರಬೇಕು ಯಾವುದೇ ಚನ್ನಾಗಿ ಇರೋ ಬಟ್ಟೆಗಳಿಲ್ಲ ಇನ್ನೂ ಪಿಎಸ್ಐ ಅಂದ್ರೆ ನಮ್ಮಂಥವರಿಗೆ ಎಲ್ಲಿ ಆಗುತ್ತವೆ ನಾನು ಬರೋದಿಲ್ಲ ಎಂದು ವಿನೋದ ಮುಕ್ತೆದಾರ್ ಗೆಳೆಯ ರಾಘವೇಂದ್ರ ಗೆ ಹೇಳ್ತಾರೆ. ಹೇ ಬಾರೋ ಮಾರಾಯ ಏನು ಆಗುತ್ತದೆ ಆಗಲಿ ಬಾ ಎಂದುಕೊಂಡು ವಿನೋದ ಮುಕ್ತೇದಾರ ನ್ನು ಜೊತೆ ಮಾಡಿಕೊಂಡು ರಾಘವೇಂದ್ರ ಗೌಡ ಬೆಂಗಳೂರಿಗೆ ಹೋಗಿ ಎಲ್ಲಾ ಮುಗಿಸಿ ಕೊನೆಗೆ ಒಂದು ಘಂಟೆಗಳ ಕಾಲ ಇವರನ್ನು ಸಂದರ್ಶನ ಮಾಡಿ ನೀವು ಪಿಎಸ್ಐ ಆಗಿ ಆಯ್ಕೆಯಾಗಿದ್ದಿರಿ ಎಂದು ಸಂದರ್ಶಕರು ಹೇಳ್ತಾರೆ ನಾನು ಅಂದುಕೊಂಡಿದ್ದು ಏನು ನಾನು ಆಗತಾ ಇರೋದು ಏನು ಏನು ಮಾಡಬೇಕು ಎಂದುಕೊಂಡ ಎರಡು ದಿನಗಳ ಕಾಲ ಊಟವಿಲ್ಲದೇ ಚಿಂತೆ ಮಾಡುತ್ತಾ ಕೊನೆಗೆ ಪಿಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರುತ್ತಾರೆ. ದುರಂತವೆಂದರೆ ವಿನೋದ ಮುಕ್ತೇದಾರನನ್ನು ಕರೆದುಕೊಂಡು ಹೋದ ರಾಘವೇದ್ರ ಆಯ್ಕೆಯಾಗೊದಿಲ್ಲ ಇವರು ಆಗುತ್ತಾರೆ. 2001 ರಲ್ಲಿ ಪೊಲೀಸ್ ಇಲಾಖೆಗೆ ಸೇವೆ ಸೇರಿ ತಮ್ಮ ಕರ್ತವ್ಯವನ್ನು ಆರಂಭ ಮಾಡುತ್ತಾರೆ.

ಆರಂಭದಿಂದಲೂ ಈವರೆಗೆ ಬರೋಬ್ಬರಿ 19 ವರುಷಗಳ ಕಾಲ ಆರೇಳು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿರುವ ವಿನೋದ ಮುಕ್ತೇದಾರ ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಪ್ರಾಮಾಣಿಕತೆಯಿಂದ ಸೇವೆ ಮಾಡ್ತಾ ಇದ್ದಾರೆ. 19 ವರುಷಗಳ ಪೊಲೀಸ್ ಇಲಾಖೆಯ ಸೇವೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ. ಇನ್ನೂ ಇತ್ತ ನ್ಯಾಯವನ್ನು ಕೇಳಿಕೊಂಡು ಠಾಣೆಗೆ ಬಂದ ಜನತೆಗೆ ಸ್ಪಂದಿಸಿದ್ದಾರೆ. ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ವಿನೋದ್ ಮುಕ್ತೇದಾರ್ ಪೊಲೀಸ್ ಜೀವನದಲ್ಲಿ ಬಾಲ್ಯದಲ್ಲಿಯೇ ಹಾಗೇ ಕೆಲವು ಕಷ್ಟಗಳನ್ನು ಅನುಭವಿಸಿ ಸಾಧನೆಯನ್ನು ಮಾಡಿದ್ದಾರೆ. 2008 ರಿಂದ 2012 ರವರೆಗೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಅನಾವಧೇಯ ವ್ಯಕ್ತಿಯ ಶವ ಪತ್ತೆಯಾಗಿತ್ತು. ಇದೊಂದು ಕೊಲೆ ಎಂದುಕೊಂಡು ಕೊಲೆಗೆ ಯಾವುದೇ ಸುಳಿವಿಲ್ಲದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ನಂತರ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಸಿ ಅವರಿಂದ ಬೇಸ್ ಎನಿಸಿಕೊಂಡಿದ್ದರು.2007 ರಲ್ಲಿ ಸಿಕ್ಕಾಪಟ್ಟಿ ಮಳೆಯಾಗಿ ಪ್ರವಾಹ ಉಂಟಾದ ಸಮಯದಲ್ಲಿ ಯಲಬುರ್ಗಾದಲ್ಲಿ 25 ಜನರು ಹಳ್ಳದಲ್ಲಿ ಸಿಲುಕಿಕೊಂಡಿದ್ದರು.ಇವರನ್ನು ತಮ್ಮ ಸಿಬಂದ್ದಿಯೊಂದಿಗೆ ಜೀವವನ್ನು ಲೆಕ್ಕಿಸದೇ ರಕ್ಷಣೆ ಮಾಡಿ ಜೀವ ಉಳಿಸಿದ್ದರು.ಇನ್ನೂ ಕಾರಟಗಿ ಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಕ್ಕಾಗಿ ಆಗಿನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರು ವಿನೋದ್ ಮುಕ್ತೇದಾರನ್ನು ವರ್ಗಾವಣೆ ಮಾಡಿಸಿದ್ದರು. ಇದರಿಂದ ಆಕ್ರೋಶಗೊಂಡ ಜನರು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ರು.

ನಂತರ ವರ್ಗಾವಣೆ ಮಾಡದೇ ಅಲ್ಲಿಯೇ ಮುಂದುವರೆಸಿದ ರಾಜ್ಯ ಸರ್ಕಾರದ ವಿರುದ್ದ ಸಚಿವರೊಬ್ಬರು ರಾಜೀನಾಮೆ ನೀಡುವ ಬೆದರಿಕೆಯನ್ನು ನೀಡಿದ್ದರು. ಇವೆಲ್ಲದರ ನಡುವೆ ಕೆಲ ದಿನಗಳ ನಂತರ ಮತ್ತೇ ಇವರನ್ನು ವರ್ಗಾವಣೆ ಮಾಡಿಸಿದ್ರು.ಹೀಗೆ ಬಾಲ್ಯದಲ್ಲಿ ಒಂದಿಷ್ಟು ಕಷ್ಟ ನೋವು ಗಳಾದರೆ ಪೊಲೀಸ್ ಇಲಾಖೆಗೆ ಸೇರಿಕೊಂಡು ಸಾರ್ವಜನಿಕರ ಸೇವೆಯಲ್ಲಿ ತೊಡಗಿದಾಗ ಬೇರೆ ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿದ ಆರೇಳು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡಿ ಮೂರು ವರುಷಗಳ ಹಿಂದೆ ಬಡ್ತಿಯನ್ನು ತಗೆದುಕೊಂಡು ಸಧ್ಯ ಹುಬ್ಬಳ್ಳಿಯ ಉತ್ತರ ವಿಭಾಗಕ್ಕೇ ಸಹಾಯಕ ಪೊಲೀಸ್ ಆಯುಕ್ತರಾಗಿ ವರ್ಗಾವಣೆಯಾದಿದ್ದಾರೆ.

ಪೊಲೀಸ್ ಕರ್ತವ್ಯದೊಂದಿಗೆ ಸಮಾಜ ಸೇವೆ

ಬಾಲ್ಯದಲ್ಲಿ ತಾವು ಅನುಭವಿಸಿದ ಕಷ್ಟ ನೋವು ಸಮಸ್ಯೆಗಳನ್ನು ಮನಗಂಡ ಪೊಲೀಸ್ ಅಧಿಕಾರಿ ವಿನೋದ್ ಮುಕ್ತೇದಾರ್ ತಮ್ಮ ಕರ್ತವ್ಯದ ನಡುವೆ ಕೆಲವೊಂದಿಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅನಾಥ ನಿರ್ಗತಿಕ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವಿರಿಗೆ ಓದಲು ಆರ್ಥಿಕವಾಗಿ ನೆರವು ನೀಡುತ್ತಿದ್ದಾರೆ.

ಈವರೆಗೆ ನೂರಾರು ಮಕ್ಕಳಿಗೆ ಆರ್ಥಿಕವಾಗಿ ನೆರವು ನೀಡಿದ್ದು ಅವರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ದೊಡ್ಡ ಇಲಾಖೆಯ ಹುದ್ದೇಯಲ್ಲಿದ್ದಾರೆ. ಈಗಲೂ ಕೂಡಾ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಇವರ ಸಾಧನೆ ಸೇವೆಯನ್ನು ಪರಿಗಣಿಸಿ ಈ ಹಿಂದೆ ಬಾಲ್ಕಿ ಬಸವಲಿಂಗ ಪಟ್ಟದ ದೇವರು ದೇವಸ್ಥಾನದಿಂದ ಕಾಯಕ ಯೋಗಿ ಪ್ರಶಸ್ತಿ ಹಾಗೇ ಯೂನಿಸೇಫ್ ಸಂಸ್ಥೆಯಿಂದ ಗ್ಲೋಬಲ್ ಅಚಿವರ್ ಆವಾರ್ಡ್ ಪ್ರಶಸ್ತಿಗಳು ಲಭಿಸಿವೆ.

ಮಾನವೀಯತೆ, ಕಠಿಣ ‌ಪರಿಶ್ರಮವನ್ನೇ ನೆಚ್ಚಿಕೊಂಡ, ಚಿತ್ತಾಪುರದ ಅತ್ಯಂತ ಬಡತನದ, ಹಿಂದುಳಿದ ‌ಕುಟುಂಬದಿಂದ ಬಂದಿರುವ ಪೊಲೀಸ್ ಅಧಿಕಾರಿ ಡಾ.ವಿನೋದ ಮುಕ್ತೇದಾರ ಪತ್ನಿ ವಿನುತಾ ಅವರ ಸಾಥ್ ನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಮಾಡಿದ್ದಾರೆ.

ಅವರು ಸಧ್ಯ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿನ ಉತ್ತರ ವಿಭಾಗದ ಎಸಿಪಿಯಾಗಿ ವರ್ಗಾವಣೆಯಾಗಿದ್ದಾರೆ.

ಪೊಲೀಸ್ ಅಧಿಕಾರಿಯೊಂದಿಗೆ ಗಾಯಕ

ಬಿಡುವಿಲ್ಲದ ಪೊಲೀಸ್ ಕರ್ತವ್ಯದ ನಡುವೆ ಸಾಮಾಜಿಕ ಕೆಲಸ ಕಾರ್ಯಗಳು ಇದರ ಮಧ್ಯೆ ಮಗುವಿನಂತಹ ಮುಗ್ಧ ಮನಸ್ಸಿನ ಇವರು ಗಾಯಕರು ಹೌದು . ಅದ್ಭುತ ‌ಗಾಯಕ ಅನ್ನೊದರಲ್ಲಿ ಎರಡು ಮಾತಿಲ್ಲ.ಬಿಡುವಿನ ಸಮಯದಲ್ಲಿ ಹತ್ತು ಹಲವಾರು ಹಾಡುಗಳನ್ನು ಹಾಡಿ ತಮ್ಮಲ್ಲಿನ ಗಾಯನದ ಪ್ರತಿಭೆಯನ್ನು ಇವರು ಆಗಾಗ್ಗೆ ತೋರಿಸಿಸುತ್ತಾರೆ.

ಈ ಹಿಂದೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ‌ಆಗಿ ನಂತರ ಬಡ್ತಿ ಪಡೆದುಕೊಂಡು ಬೇರೆ ಕಡೆಗೆ ಹೋಗಿ ಸಧ್ಯ ಉನ್ನತ ಹುದ್ದೆಯೊಂದಿಗೆ ಮರಳಿ ಹುಬ್ಬಳ್ಳಿಗೆ ಬರುತ್ತಿದ್ದಾರೆ ಸುದ್ದಿ ಸಂತೆ ವೇಬ್ ನ್ಯೂಸ್ ಪರವಾಗಿ ಅಭಿನಂದನೆಗಳು. ಪ್ರಾಮಾಣಿಕ ‌ಪೊಲೀಸ್ ಅಧಿಕಾರಿಗೆ ಶುಭವಾಗಲಿ ಇನ್ನಷ್ಟು ನಿಮ್ಮ ಒಳ್ಳೇಯ ಕೆಲಸ ಕಾರ್ಯಗಳು ನಡೆಯಲಿ ಆಲ್ ದಿ ಬೆಸ್ಟ್ ವಿನೋದ್ ಮುಕ್ತೇದಾರ್ ಸರ್ ಜೀ.


Google News

 

 

WhatsApp Group Join Now
Telegram Group Join Now
Suddi Sante Desk