ವಿಜಯಪುರ –
ವಿಶೇಷ ಶಿಕ್ಷಕರ ನೇಮಕಾತಿ ಗಾಗಿ ಶಿಕ್ಷಕರೊಬ್ಬರ ಬಳಿ 25000 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ವಿಜಯಪುರ ಜಿಲ್ಲೆಯ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಜಯಕುಮಾರ ಪವಾರ ಇವರನ್ನು ಎಸಿಬಿ ಅಧಿಕಾರಿಗಳು ಎಲ್ಲಾ ಕಾರ್ಯಗಳನ್ನು ಮುಗಿಸಿ ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದಾರೆ.ನಿನ್ನೇ ಕಚೇರಿಯಲ್ಲಿ ಶಿಕ್ಷಕರೊ ಬ್ಬರ ಬಳಿ ಹಣವನ್ನು ತಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದರು.ನಂತರ ವಶಕ್ಕೆ ತಗೆದುಕೊಂಡ ಅಧಿಕಾರಿಗಳು ತನಿಖೆ ಮಾಡಿ ಎಲ್ಲಾ ಕಾರ್ಯಗಳನ್ನು ಮುಗಿಸಿ ಸಧ್ಯ ಭ್ರಷ್ಟ ನೌಕರರನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದಾರೆ.
ಜಿಲ್ಲೆಯಲ್ಲಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೀಮಿಂಗಲು ಆಗಿದ್ದ ಇವರು ಶಿಕ್ಷಕರಿಗೆ ದೊಡ್ಡ ತಲೆನೋವಾಗಿದ್ದರು. ಈಗಾಗಲೇ ಹಲವು ಬಾರಿ ಟ್ರ್ಯಾಪ್ ಮಾಡಲು ಮುಂದಾಗಿ ಕೊನೆ ಗಳಿಗೆಯಲ್ಲಿ ಕೈಬಿಟ್ಟಿದ್ದರು. ಕೊನೆಗೂ ಬೇಸತ್ತು ಶಿಕ್ಷಕ ಸತೀಸ್ ಎಂಬುವರಿಂದ ನಿನ್ನೇ 25000 ಸಾವಿರ ರೂಪಾಯಿ ತಗೆದುಕೊಳ್ಳುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ವಶಕ್ಕೆ ತಗೆದುಕೊಂಡಿರುವ ಎಸಿಬಿ ಪೊಲೀಸರು ಸಧ್ಯ ವಿಜಯಕುಮಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದಾರೆ.