ಪತ್ರಕರ್ತರ ಮೇಲೆ ACP ಗುಂಡಾ ವರ್ತನೆ – ಪದೇ ಪದೇ ಗುಂಡಾ ವರ್ತನೆ ಮಾಡುತ್ತಿರುವ ACP ವಿರುದ್ದ ಸಿಡಿದೆದ್ದ ಪತ್ರಕರ್ತರು…..ಮನವಿ ನೀಡಲು SR BooK ಸಮಸ್ಯೆಯಾಗುತ್ತಂತೆ ಏನಿದು ಕಥೆ…..

Suddi Sante Desk
ಪತ್ರಕರ್ತರ ಮೇಲೆ ACP ಗುಂಡಾ ವರ್ತನೆ – ಪದೇ ಪದೇ ಗುಂಡಾ ವರ್ತನೆ ಮಾಡುತ್ತಿರುವ ACP ವಿರುದ್ದ ಸಿಡಿದೆದ್ದ ಪತ್ರಕರ್ತರು…..ಮನವಿ ನೀಡಲು SR BooK ಸಮಸ್ಯೆಯಾಗುತ್ತಂತೆ ಏನಿದು ಕಥೆ…..

ಹುಬ್ಬಳ್ಳಿ

ಪತ್ರಕರ್ತರ ಮೇಲೆ ACP ಗುಂಡಾ ವರ್ತನೆ  ಪದೇ ಪದೇ ಗುಂಡಾ ವರ್ತನೆ ಮಾಡುತ್ತಿರುವ ACP ವಿರುದ್ದ ಸಿಡಿದೆದ್ದ ಪತ್ರಕರ್ತರು ಮನವಿ ನೀಡಲು ಹಿಂದೇಟು ಯಾಕೇ…..

ಹುಬ್ಬಳ್ಳಿಯಲ್ಲಿ ಪತ್ರಕರ್ತರ ಮೇಲೆ ಎಸಿಪಿ ಬಾಳಪ್ಪ ನಂದಗಾವಿ ಗುಂಡಾ ವರ್ತನೆಯನ್ನು ತೋರುತ್ತಿದ್ದಾರೆ.ಹೌದು ಕರ್ತವ್ಯಕ್ಕೆ ತೆರಳಿದ ಸಮಯದಲ್ಲಿ ಹಲವೆಡೆ ಪತ್ರಕರ್ತರಿಗೆ ಸಹಕಾರ ವನ್ನು ನೀಡಬೇಕಾದ ಈ ಎಸಿಪಿ ಸಾಹೇಬ್ರು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ.

ಮೇಲಿಂದ ಮೇಲೆ ಸಾಕಷ್ಟು ಪ್ರಕರಣಗಳು ನಡೆದರು ಕೂಡಾ ತಮ್ಮ ಗುಂಡಾ ವರ್ತನೆಯನ್ನು ಎಸಿಪಿ ಬಾಳಪ್ಪ ನಂದಗಾವಿಯವರು ಪತ್ರಕರ್ತರ ಮೇಲೆ ತೋರುತ್ತಿದ್ದಾರೆ.ಇದಕ್ಕೆ ಸಾಕ್ಷಿ ನಗರದಲ್ಲಿ ಮಂಗಳವಾರ ಕಂಡು ಬಂದ ಘಟನೆ.ಈ ಹಿಂದೆ ಖಾಸಗಿ ವಾಹಿನಿಯೊಂದರ ವರದಿಗಾರರೊಬ್ಬ ರಿಗೆ ಹೊಟೇಲ್ ನಲ್ಲಿನ ವಿಡಿಯೋ ವೊಂದರ ಕುರಿತಂತೆ ಮಾಹಿತಿಯನ್ನು ನೀಡಿದ ಕೂಡಲೇ

ಕ್ರಮವನ್ನು ಕೈಗೊಳ್ಳುವ ಬದಲಿಗೆ ವರದಿಗಾರರ ಮೇಲೆ ಇಲ್ಲಸಲ್ಲದ ಕಥೆಯನ್ನು ಕಟ್ಟಿ ಪೊಲೀಸ್ ಆಯುಕ್ತರಿಗೆ ಏನೇನೊ ಹೇಳಿ ಛೀಮಾರಿ ಹಾಕಿಸಿ  ಕೊಂಡಿದ್ದರು.ಈ ಒಂದು ಘಟನೆ ನಡೆದ ನಂತರ ಇನ್ನೂಳಿದಂತೆ ಹಿರಿಯ ವರದಿಗಾರರಿಗೂ ಕೂಡಾ ಚುನಾವಣೆಯ ಸಮಯದಲ್ಲಿ ಪಾಸ್ ಇದ್ದರೂ ಕೂಡಾ ಒಳಗಡೆ ಬಿಟ್ಟಿರಿರಲಿಲ್ಲ ಕರ್ತವ್ಯಕ್ಕೆ ತೆರಳಿದ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿಯನ್ನುಂ ಟು ಮಾಡಿದ್ದರು.

ಇದರೊಂದಿಗೆ ಜಗದೀಶ್ ಶೆಟ್ಟರ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಂದ ಸಮಯ ದಲ್ಲಿ ವರದಿಗಾರರನ್ನು ಒಳಗಡೆ ಬಿಡದೇ ಗುಂಡಾ ವರ್ತನೆ ತೋರಿದ್ದರು.ಹೀಗೆ ಮೇಲಿಂದ ಮೇಲೆ ಎಸಿಪಿ ಬಾಳಪ್ಪ ನಂದಗಾವಿ ಯವರ ಗುಂಡಾ ವರ್ತನೆಗಳು ನಡೆಯುತ್ತಿದ್ದು ಈ ಒಂದು ವರ್ತನೆಯಿಂದ ಪತ್ರಕರ್ತರು ಸಿಡಿದೆದ್ದಿ ದ್ದಾರೆ.

ಈ ಒಂದು ವಿಚಾರ ಕುರಿತಂತೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲು ಮುಂದಾಗಿದ್ದು ಪದೇ ಪದೇ ಪತ್ರಕರ್ತರ ಮೇಲೆ ಗುಂಡಾ ವರ್ತನೆ ಯನ್ನು ತೋರುತ್ತಾ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವ ಎಸಿಪಿ ವಿರುದ್ದ ಸೂಕ್ತವಾದ ಕ್ರಮ ವನ್ನು ಕೈಗೊಳ್ಳುಂತೆ ಕಾರ್ಯನಿರತ ಪತ್ರಕರ್ತರು ಒತ್ತಾಯವನ್ನು ಮಾಡಿದ್ದು ಖಡಕ್ ಪೊಲೀಸ್ ಆಯುಕ್ತರು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬೊಂದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.