ಬೆಂಗಳೂರು –
ನಟ ಸಂಚಾರಿ ವಿಜಯ್ ಅಪಘಾತದಲ್ಲಿ ಮೃತರಾಗಿದ್ದು ಒಂದು ವರ್ಷವಾಗುತ್ತಿದೆ.ಮತ್ತೊಂದೆಡೆ ಮುಂದಿನ ತಿಂಗಳ ಲ್ಲೇ ಅವರ ಇನ್ನೊಂದು ಜನ್ಮದಿನ(ಜು. 17)ಬರಲಿದೆ.ಈ ಮಧ್ಯೆ ಅವರ ಒಂದಷ್ಟು ಸ್ನೇಹಿತರು,ಹಿತೈಷಿಗಳೆಲ್ಲ ಸೇರಿ ಅವರ ಊರಿನ ಶಾಲೆಗೆ ಸುಣ್ಣ-ಬಣ್ಣ ಬಳಿದು ತಮ್ಮನೆಚ್ಚಿನ ನಟ-ಗೆಳೆಯನನ್ನು ಸ್ಮರಿಸಿಕೊಂಡಿದ್ದಾರೆ

ಈಗಾಗಲೇ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ನಡೆಸಿ ಗಮನ ಸೆಳೆದಿರುವ ಕನ್ನಡ ಮನಸುಗಳ ಪ್ರತಿಷ್ಠಾನ ಇಂಥ ದ್ದೊಂದು ಕಾರ್ಯ ಮಾಡಲು ಮುಂದಾಗಿದೆ.ಈ ಪ್ರತಿಷ್ಠಾನ ಇದುವರೆಗೆ 12 ಸರ್ಕಾರಿ ಶಾಲೆಗಳನ್ನು ಗುರುತಿಸಿ ಬಣ್ಣ ಬಳಿದು ಆ ಶಾಲೆಗೆ ಅಗತ್ಯವಿರುವ ಒಂದಷ್ಟು ವಸ್ತುಗಳನ್ನು ನೀಡಿ ನೆರವಾಗುತ್ತ ಬಂದಿದೆ.ಮತ್ತೆ ಬಣ್ಣ ಹಚ್ಚಿದ್ದು ನಟಿ ನೀತೂ ಶೆಟ್ಟಿ ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ

ತಮ್ಮ ಮುಂದಿನ ಈ ಅಭಿಯಾನವನ್ನು ನಟ ಸಂಚಾರಿ ವಿಜಯ್ ಓದಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಣೇಗೇರಿ ಸರ್ಕಾರಿ ಪ್ರೌಢಶಾಲೆ ಮತ್ತು ಪಂಚ ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸ ಲಿದೆ.ಜುಲೈ 16 ಮತ್ತು 17ರಂದು ಇವೆರಡು ಶಾಲೆಗಳಿಗೆ ಬಣ್ಣ ಬಳಿಯುವ ಜತೆಗೆ ಫ್ಯಾನ್ ಪ್ರೊಜೆಕ್ಟರ್,ವಾಟರ್ ಫಿಲ್ಟರ್,ಸ್ಪೀಕರ್ ಇತ್ಯಾದಿಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಪ್ರತಿಷ್ಠಾನದ ಪವನ್ ತಿಳಿಸಿದ್ದಾರೆ.ಅಲ್ಲದೆ ತಮ್ಮ ಈ ಕಾರ್ಯದ ಜತೆ ಇತರರೂ ಕೈಜೋಡಿಸಬಹುದು ಎಂದು ಹೇಳಿದರು

