ಹುಬ್ಬಳ್ಳಿ ಧಾರವಾಡ –
26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ವಿದ್ಯಾನಗರಿ ಧಾರವಾಡ ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗಿವೆ.ಜನೆವರಿ 12 ರಿಂದ ಐದು ದಿನಗಳ ಕಾಲ ಅವಳಿ ನಗರದಲ್ಲಿ ಈ ಒಂದು ಉತ್ಸವ ನಡೆಯಲಿದೆ.
ಈಗಾಗಲೇ ದೇಶದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿದ್ದು ಇನ್ನೂ ಹೆಸರಾಂತ ದೊಡ್ಡ ಪ್ರಮಾಣದ ಈ ಒಂದು ರಾಷ್ಟ್ರೀಯ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ಮತ್ತು ಧಾರವಾಡ ಮಧುವಣಗಿತ್ತಿಯಂತೆ ಸಜ್ಜಾಗಿ ಸಿಂಗಾರಗೊಂಡು ನಿಂತಿವೆ.
ಹೌದು ಧಾರವಾಡದ ಪ್ರಮುಖ ರಸ್ತೆಗಳೆಲ್ಲವೂ ವಿದ್ಯುತ್ ದೀಪಗಳಿಂದ ಕಂಗೋಳಿಸುತ್ತಿವೆ ಸರ್ಕಾರಿ ಕಚೇರಿಗಳು ಬಗೆ ಬಗೆಯ ವಿದ್ಯುತ್ ದೀಪಗಳಿಂದ ವರ್ಣಿರಂಜಿತವಾಗಿ ಕಂಗೋಳಿಸು ತ್ತಿದ್ದರೆ ಇನ್ನೂ ಇತ್ತ ರಸ್ತೆಗಳು ಕೂಡಾ ಕಲರ್ ಕಲರ್ ವಿದ್ಯುತ್ ಲೈಟ್ ಗಳಿಂದ ಆವರಿಸಿಕೊಂಡು ರಂಜಿತವಾಗಿ ಕಂಗೋಳಿಸುತ್ತಿದ್ದು
ಇದರ ನಡುವೆ ರಸ್ತೆಗಳು ಕೂಡಾ ಜಗಮಗಿಸು ತ್ತಿದ್ದು ಧಾರವಾಡ ವರ್ಣರಂಜಿತವಾಗಿ ಕಂಗೋ ಳಿಸುತ್ತಾ ಕೈ ಬೀಸಿ ಕರೆಯುತ್ತಿದ್ದು ಇನ್ನೂ ಹೆಸ ರಾಂತ ಕೆಸಿಡಿ ಕಾಲೇಜಿನ ಕಟ್ಟಡಕ್ಕೂ ಕೂಡಾ ವಿದ್ಯುತ್ ದೀಪಗಳಿಂದ ಶೃಂಗಾರವನ್ನು ಮಾಡ ಲಾಗಿದ್ದು ಮೂರು ಬಣ್ಣಗಳಿಂದ ಕಂಗೋಳಿಸು ತ್ತಿದ್ದು ನೋಡುಗಳನ್ನು ತನ್ನತ್ತ ಈ ಒಂದು ಕಟ್ಟಡ ಕೈಬೀಸಿ ಕರೆಯುತ್ತಿದೆ.
ಇದರೊಂದಿಗೆ ಧಾರವಾಡ ಈ ಒಂದು ರಾಷ್ಟ್ರೀಯ ಹಬ್ಬಕ್ಕಾಗಿ ಸಿದ್ದಗೊಂಡಿದ್ದು ವಿದ್ಯುತ್ ದೀಪಗಳ ನಡುವೆ ತಯಾರಾಗಿ ನಿಂತುಕೊಂಡಿದೆ.ಇನ್ನೂ ಈ ಒಂದು ವಿಚಾರ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತಂತೆ ಉಲ್ಲೇಖವನ್ನು ಮಾಡಿದ್ದಾರೆ.
ಹಬ್ಬಕ್ಕಾಗಿ ಅವಳಿ ನಗರಗಳು ಮಧುವಣಗಿತ್ತಿ ಯಂತೆ ಶೃಂಗಾರಗೊಂಡಿದ್ದು ಬನ್ನಿ ಈ ಐತಿಹಾಸಿಕ ಉತ್ಸವದಲ್ಲಿ ನಾವೆಲ್ಲರೂ ಪಾಲ್ಗೊಂಡು ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗೋಣ ಎಂದಿದ್ದಾರೆ.
ಅಲ್ಲದೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.