ಬೆಂಗಳೂರು –
ಬರೋಬ್ಬರಿ 14 ವರ್ಷಗಳ ನಂತರ ಕಕ್ಕೇರಾ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ SDMC ರಚನೆ ಮಾಡಲಾಗಿದೆ ಹೌದು 14 ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಯನ್ನು ರಚಿಸಲಾಯಿತು.ರಾಮಣ್ಣಗೌಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು ಎಂದು ಶಾಲಾ ಮುಖ್ಯಶಿಕ್ಷಕ ಬಸವರಾಜ ಗುತ್ತೇದಾರ ಹೇಳಿದರು.ಚಂದ್ರು, ಶಿವಮ್ಮ, ಮಂಜುನಾಥ, ಪರಶುರಾಮ,ಮಹಾದೇವಿ,ರೂಪಾ,ಲಕ್ಷ್ಮೀ,ಹುಸೇನ ಸಾಬ ತಯ್ಯಾಬಾ,ಆನಂದ ಬೋಯಿ,ಬಸಮ್ಮ ಹಡಪದ, ಸೋಮಶೇಖರ,ರಮೇಶ,ಮಹಾದೇವಿ,ಸಂಗೀತಾ ಸದಸ್ಯ ರಾಗಿ ಆಯ್ಕೆಯಾಗಿದ್ದಾರೆ.
.
14 ವರ್ಷಗಳ ನಂತರ ಆಯ್ಕೆ ಮಾಡಲಾಯಿತು ರಾಜ ಕೀಯ ಪ್ರವೇಶದಿಂದ ಈ ಶಾಲೆಗೆ ಎಸ್‌ಡಿಎಂಸಿ ಸಮಿತಿ ರಚನೆಯಾಗದೇ ನನೆಗುದ್ದಿಗೆ ಬಿದ್ದಿತ್ತು.2014ರಲ್ಲಿ ಪೊಲೀ ಸರ ಸಮ್ಮುಖದಲ್ಲಿ ಸಮಿತಿ ರಚನೆಗೆ ಸಭೆ ಕರೆದಾಗಲೂ ಮಕ್ಕಳ ಪಾಲಕರ ಬದಲಿ ರಾಜಕೀಯ ಮುಖಂಡರ ಆಗಮನದಿಂದ ಸಭೆ ರದ್ದುಗೊಳಿಸಲಾಗಿತ್ತು.ಈಗಿನ ಶಾಲಾ ಮುಖ್ಯಶಿಕ್ಷಕ ಬಸವರಾಜ ಗುತ್ತೇದಾರ ಕಳೆದ ವರ್ಷ 2ಸಲ ಸಮಿತಿ ರಚನೆಗೆ ಸಭೆ ಕರೆದಾಗ ಪಾಲಕ,ಪೋಷಕರು ಯಾರೂ ಆಗಮಿಸಿರಲಿಲ್ಲ.ಅಂತಿಮವಾಗಿ ಇಂದು ಶಾಲೆಯಲ್ಲಿ ದಾಖಲಾಗಿರುವ ಮಕ್ಕಳ ಪಾಲಕರು ಮಾತ್ರ ಈ ಸಭೆಗೆ ಬರಬೇಕೆಂಬ ಸೂಚನೆಗೆ ಪಾಲಕರು ಸಹ ಸಮ್ಮತಿಸಿ ಆಗಮಿಸಿದ್ದರು.ಹೀಗಾಗಿ ಪಟ್ಟಣದ ಪ್ರಮುಖರ ಉಪಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಬರದಂತೆ ಸರಳ ವಾಗಿ ಹಾಗೂ ಅವಿರೋಧವಾಗಿ 14 ವರ್ಷಗಳ ನಂತರ ಸಮಿತಿ ರಚಿಸಲಾಯಿತು.ಇನ್ನೂ ಈ ಒಂದು ಸಮಯದಲ್ಲಿ
ವೆಂಕಟೇಶ ನಾಯಕ ಜಹಾಗೀರದಾರ,ರಮೇಶಶೆಟ್ಟಿ, ಗುಂಡಪ್ಪ ಸೊಲ್ಲಾಪುರ,ಲಕ್ಷ್ಮಣ ಲಿಂಗದಳ್ಳಿ,ಚಂದ್ರು ವಜ್ಜಲ್,ಪರಮಣ್ಣ ವಡಿಕೇರಿ,ಬುಚ್ಚಪ್ಪ ಗುರಿಕಾರ,ಸಿಆರ್ಪಿ ರವಿ ಕೊಟ್ಯಾಳ್, ಶಿಕ್ಷಕ ರಂಜಾನ ಲೋಣಿ, ಇಸ್ಮಾಯಿಲ್, ದೇವರಾಜಗೌಡ,ಮಚ್ಚೇಂದ್ರ ಸಾಳಿ,ರಾಘವೇಂದ್ರ ಅಂಕುಶ, ಸೋಮು,ಬಸಣ್ಣ ಸೇರಿದಂತೆ ಹಲವರು ಇದ್ದರು