ಧಾರವಾಡ –
91 ವರ್ಷದ ನಂತರ ಧಾರವಾಡದಲ್ಲಿ ಪೊಲೀಸ್ ಠಾಣೆಗೆ ಹೊಸ ಕಳೆಯೊಂದಿಗೆ ಬಂತು ಮರು ಜೀವ – ಇನಸ್ಪೇಕ್ಟರ್ ಕಾಡದೇವರ ಮಾರ್ಗ ದರ್ಶನ ಬಸವರಾಜ ಕುರಿ,ಹನಮಂತ ರೊಳ್ಳಿ, ಬಸಯ್ಯ ಸುತಗಟ್ಟಿಮಠ,ವಿಠ್ಠಲ ಕಾರ್ಯಕ್ಕೆ ನೆರವಾದರು ಸಾರ್ಜಜನಿಕರು…..ಜನಸ್ನೇಹಿ ಹೊರ ಪೊಲೀಸ್ ಠಾಣೆ ಮತ್ತೆ ಜನಸೇವೆಗೆ ಸಿದ್ದ
ಹೌದು ಇಂತಹದೊಂದು ವಿಶೇಷವಾದ ಸಾಧನೆ ಯನ್ನು ಧಾರವಾಡದಲ್ಲಿ ಶಹರ ಪೊಲೀಸ್ ಠಾಣೆ ಸಿಬ್ಬಂದಿಗಳು ಮಾಡಿದ್ದಾರೆ.ಪೊಲೀಸರು ಸಾರ್ವಜನಿಕರು ಮನಸ್ಸು ಮಾಡಿದರೆ ಏನೇಲ್ಲಾ ಮಾಡಬಹುದು ಎಂಬೊದಕ್ಕೆ ಸುಂದರವಾಗಿ ಕಂಗೊಳಿಸುತ್ತಿರುವ ಈ ಒಂದು ಪೊಲೀಸ್ ಠಾಣೆಯೇ ಸಾಕ್ಷಿಯಾಗಿದ್ದು ಸ್ವಾತಂತ್ರೋತ್ಸವದ ದಿನದಂದು ಮತ್ತೆ ಸಾರ್ವಜನಿಕರ ಸೇವೆಗೆ ಸಿದ್ದಗೊಂಡಿದೆ.
ಈ ಹಿಂದೆ 1933 ರಲ್ಲಿ ಅಂದು ಬ್ರಿಟಿಷರು ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಭೂಸಪ್ಪ ಚೌಕ್ ಹೊರ ಪೊಲೀಸ್ ಠಾಣೆಯನ್ನು ಆರಂಭ ಮಾಡಿದ್ದರು.ಹಲವು ವರ್ಷಗಳ ಕಾರ್ಯ ಕಾರ್ಯವನ್ನು ಮಾಡಿದ್ದ ಈ ಒಂದು ಹೊರ ಪೊಲೀಸ್ ಠಾಣೆ ನಂತರ ಶಿಥಿಲಾ ವಸ್ಥೆಯಾಗಿ ಬಿದ್ದು ಹೋಗಿ ಹಾಳಾಗಿತ್ತು ಅದರಲ್ಲೂ ಇತ್ತಿಚಿಗಂತೂ ಕಸ ಕಡ್ಡಿಗಳಿಂದ ತುಂಬಿದ್ದ ಈ ಒಂದು ಹೊರ ಪೊಲೀಸ್ ಠಾಣೆಯ ಕಟ್ಟಡ ಹಾಲಾಳಾ ಅನಾಥವಾಗಿತ್ತು
ಇನ್ನೇನು ಸಂಪೂರ್ಣವಾಗಿ ಹಾಳಾಗಿ ಕಟ್ಟಡವನ್ನು ಯಾರಾದರು ಒತ್ತುವರಿ ಮಾಡಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿಯೇ ಶಹರ ಪೊಲೀಸ್ ಅಧಿಕಾರಿ ಕಾಡದೇವರ ಇವರ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹನಮಂತ ರೊಳ್ಳಿ,ಬಸಯ್ಯ ಸುತಗಟ್ಟಿಮಠ,ವಿಠ್ಠಲ ಮಾಯನ್ನವರ,ಮತ್ತು ಬಸವರಾಜ ಕುರಿ ಸೇರಿಕೊಂಡು ಇದಕ್ಕೆ ಒಂದು ಪ್ಲಾನ್ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ವಿಚಾರವನ್ನು ತಗೆದುಕೊಂಡು ಬಂದಿದ್ದಾರೆ.
ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಯಿಂದ ಒಂದೇ ಒಂದು ರೂಪಾಯಿಯನ್ನು ಅನುದಾನವನ್ನು ತಗೆತುಕೊಳ್ಳದೇ ಸಾರ್ವಜ ನಿಕರೆ 5 ಲಕ್ಷ ರೂಪಾಯಿ ವರೆಗೆ ದೇಣಿಗೆ ನೀಡಿ ಠಾಣೆಗೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಮರು ಜೀವವನ್ನು ನೀಡಿ ಸುಂದರವಾಗಿ ಕಂಗೋ ಳಿಸುವಂತೆ ಮಾಡಿದ್ದಾರೆ.
ಸರ್ಕಾರದಿಂದ ಒಂದೇ ಒಂದು ರೂಪಾಯಿ ಪಡೆಯದೇ ಮರು ಜೀವ ನೀಡಿದ್ದಾರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದರೊಂದಿಗೆ ಹೊರ ಕಳೆ ಬಂದಿದೆ ಹೊರ ಪೊಲೀಸ್ ಠಾಣೆಗೆ ಇತಿಹಾಸ ಪುಟ ಸೇರಿದ್ದ ಹೋರ ಪೊಲೀಸ್ ಠಾಣೆಗೆ ಸಧ್ಯ ಸ್ವಾತಂತ್ರತ್ಸೋವ ದಿನದಂದು ಮರು ಜೀವವನ್ನ ನೀಡಿದ್ದಾರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು.
ಶಿಥಿಲಾವಸ್ಥೆಯಾಗಿ ಭೂತ ಬಂಗ್ಲೆಯಾಗಿ ಸಂಪೂರ್ಣವಾಗಿ ಹಾಳಾಗಿ ಅನಾಥವಾಗಿತ್ತು ಕಟ್ಟಡ.ಕಸ ಕಡ್ಡಿಗಳಿಂದ ಸಂಪೂರ್ಣವಾಗಿ ತುಂಬಿಕೊಂಡು ಹಾಳಾಗಿತ್ತು ಕಟ್ಟಡ ಬರೊಬ್ಬರಿ 90 ವರ್ಷಗಳ ನಂತರ ಹೊರ ಪೊಲೀಸ್ ಠಾಣೆಗೆ ಬಂತು ಹೊಸ ಕಟ್ಟಡ ಭಾಗ್ಯ ಬಂದಂತಾಗಿದೆ ಧಾರವಾಡದ ಶಹರ ಪೊಲೀಸ್ ಠಾಣೆಯ ಭೂಸಪ್ಪ ಚೌಕ್ ಹೊರ ಪೊಲೀಸ್ ಠಾಣೆ
ಸಂಪೂರ್ಣವಾಗಿ ಹಾಳಾಗಿ ಅನಾಥವಾಗಿದ್ದ ಕಟ್ಟಡಕ್ಕೆ ಹೊಸ ಕಳೆ ನೀಡಿದ ಪೊಲೀಸ್ ಅಧಿಕಾರಿಗಳು
ಸಾರ್ವಜನಿರು ಮನಸ್ಸು ಮಾಡಿದರೆ ಸಾಧನೆ ಎಂಬೊದು ದೊಡ್ಡದಲ್ಲ ಎಂಬೊದಕ್ಕೆ ಸಾಕ್ಷಿಯಾ ಯಿತು ಕಟ್ಟಡ ನಿರ್ಮಾಣ ಕಾರ್ಯ ಶಹರ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಕಾಡದೇವರ, ಎಎಸ್ಐ ಬಸವರಾಜ ಕುರಿ,ಸಿಬ್ಬಂದಿಗಳಾದ ಬಸಯ್ಯ ಸುತಗಟ್ಟಿಮಠ,ವಿಠ್ಠಲ ಮಾಯಣ್ಣ ನವರ,ಹನಮಂತ ರೋಳ್ಳಿ ಯವರಿಂದ ನಿರ್ಮಾಣಗೊಂಡಿದು ಕಟ್ಟಡ ಈ ಒಂದು ಮಹಾನ್ ಕಾರ್ಯ ದಲ್ಲಿ ಪೊಲೀಸರಿಗೆ ಕೈ ಜೋಡಿಸಿದ್ದಾರೆ ಸಾರ್ವಜನಿಕರರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..